ಎಸಿಸಿಎ ಪರೀಕ್ಷೆ: ಮೊದಲ ಯತ್ನದಲ್ಲೇ ತೇರ್ಗಡೆಯಾದ ಹುದಾ ನೂರ್
Update: 2025-01-18 14:52 IST
ಮಂಗಳೂರು, ಜ.18: ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ (ACCA) ನಡೆಸಿದ ಎಸಿಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಹುದಾ ನೂರ್ ತನ್ನ ಮೊದಲ ಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ.
ಅಬ್ದುಲ್ ರಶೀದ್ ಮಣಿಪಾಲ-ಶಾಕಿರಾ ದಂಪತಿಯ ಪುತ್ರಿಯಾಗಿರುವ ಈಕೆ ನಗರದ ವಾಸ್ ಲೇನ್ ನಿವಾಸಿ ಅಹ್ಮದ್ ಮುಝಮ್ಮಿಲ್ ಅವರ ಪತ್ನಿ.