×
Ad

ಅನ್ವರ್ ಹುಸೈನ್ ಉಳ್ಳಾಲ ನಿಧನ

Update: 2023-10-18 22:12 IST

ಮಂಗಳೂರು: ಮತ್ಸ್ಯ ಉದ್ಯಮಿ, ಮರೈನ್ ಎಂಟರ್‌ಪ್ರೈಸಸ್‌ನ ಮಾಲಕ, ಉಳ್ಳಾಲ ನಿವಾಸಿ ಅನ್ವರ್ ಹುಸೈನ್ (79) ಬುಧವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬ್ಲೂಲೈನ್‌ನ ಮಾಲಕ ಶೌಕತ್ ಶೌರಿ ಸಹಿತ ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಉಳ್ಳಾಲವನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿದ್ದ ‘ಉಳ್ಳಾಲ ಸೆಂಟ್ರಲ್ ಕಮಿಟಿ’ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು.

ಕಳೆದ ಹಲವು ವರ್ಷದಿಂದ ಮತ್ಸ್ಯೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅನ್ವರ್ ಹುಸೈನ್ ಕೊಡುಗೈ ದಾನಿಯೂ ಆಗಿದ್ದರು. ಅನೇಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿ ಅವುಗಳ ಪುನಶ್ಚೇತನಕ್ಕೆ ಕಾರಣರಾಗಿದ್ದರು. ಜನಪರ ಸೇವೆಗೆ ಸದಾ ಮಿಡಿಯುತ್ತಿದ್ದ ಅವರು ಸಮಾಜದ ತಳಮಟ್ಟದ ಜನರಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದರು.

ಗುರುವಾರ ಬೆಳಗ್ಗೆ 9ಗಂಟೆಗೆ ಉಳ್ಳಾಲ ಮುಕ್ಕಚೇರಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News