ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಗೆ ಹಲವು ಯೋಜನೆ: ರಮೇಶ್ ಬೋಳಿಯಾರ್
ಉಳ್ಳಾಲ: ಸ್ಪೀಕರ್ ಯು.ಟಿ.ಖಾದರ್ ಅವರು ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಈಗಾಗಲೆ ಐದು ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್ ಹೇಳಿದ್ದಾರೆ.
ಅವರು ಬೀರಿ ಬಳಿ ಲೋಕೋಪಯೋಗಿ ಇಲಾಖೆಯವರು ವಾಣಿಜ್ಯ ತೆರಿಗೆ ಇಲಾಖೆಯವರಿಗೆ ಕಾದಿರಿಸಿದ ಜಾಗದಲ್ಲಿ ಶೆಡ್ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಬಹು ನಿರಾವರಿ ಕುಡಿಯುವ ನೀರು ಒಂಭತ್ತು ಕೋಟಿ ರೂ, ವೆಚ್ಚದಲ್ಲಿ ಜಪ್ಪಿನಮೊಗರುವಿನಿಂದ ಅಂಡರ್ ಗ್ರೌಂಡ್ ವಿದ್ಯುತ್ ಸಂಪರ್ಕ ಕಾಮಗಾರಿ ಜೊತೆಗೆ ಕೋಟೆಕಾರ್ ನಲ್ಲಿ ಮೆಸ್ಕಾಂನ 33 ಕೆವಿ ವಿದ್ಯುತ್ ಉಪ ಸ್ಥಾವರ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ವಾರ್ಡ್ ಅಭಿವೃದ್ಧಿ ಗೆ 35 ಲಕ್ಷ ರೂ. ಅನುದಾನವನ್ನು ಸ್ಥಳೀಯ ಶಾಸಕರು ಆಗಿರುವ ಯು.ಟಿ.ಖಾದರ್ ಮೀಸಲು ಇಟ್ಟಿದ್ದಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಬೀರಿ ಬಳಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದೆ. ಶೀಘ್ರ ಈ ಕಟ್ಟಡ ನಿರ್ಮಾಣ ಆಗಿ ಕೋಟೆಕಾರ್ ಪಟ್ಟಣ ಪಂಚಾಯತ್ ಅಭಿವೃದ್ಧಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅಹ್ಮದ್ ಅಜ್ಜಿನಡ್ಕ, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ ಕುಮಾರ್, ಸದಸ್ಯ ಹರೀಶ್ ರೈ, ಸುರೇಶ್ ಭಟ್ನಗರ, ಮನ್ಸೂರ್ ಮಂಚಿಲ, ಕಾಂಗ್ರೆಸ್ ಕೋಟೆಕಾರ್ ವಲಯ ಅಧ್ಯಕ್ಷ ಡಿ.ಎಂ.ಮುಹಮ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಶೈನಾಝ್, ಉಪಾಧ್ಯಕ್ಷ ಮೈಮುನಿಸಾ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ, ರಾಘವ ಉಚ್ಚಿಲ, ಜೆಸಿಂತಾ ಮೆಂಡೋನ್ಸ, ಮೊಯ್ದಿನ್ ಬಾವಾ, ಇಸಾಕ್, ಪ್ರೇಮನಾಥ್ , ಚಂದ್ರಿಕಾ ರೈ, ಪವನ್ ರಾಜ್, ಸೈಫುಲ್ಲಾ ಸೋಮೇಶ್ವರ, ಅಮಿತಾ ಬಂಡಿಕೋಟ್ಯ, ಯು.ಟಿ.ಫರೀದ್, ಇಸಾಕ್ ಅಜ್ಜಿನಡ್ಕ, ಪ್ರೇಮ್ ಕೊಲ್ಯ, ಬಾವಾ ಕೆ.ಸಿ.ರೋಡ್, ತುಳಸಿ ಮತ್ತಿತರರು ಉಪಸ್ಥಿತರಿದ್ದರು.