×
Ad

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟ

Update: 2025-11-29 14:37 IST

ಬೆಳ್ತಂಗಡಿ : ಕಡಿಮೆ ದರಕ್ಕೆ ಕಾರು ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಬಳಿಕ ಚೆಕ್ ನೀಡಿ ಮೋಸ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ.

ಬೆಳ್ತಂಗಡಿಯ ಲಾಯಿಲದ ಪಾದ್ರಿ ಒಬ್ಬರ ಮೂಲಕ 2020 ರಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿ ಎಂದು ಪರಿಚಯಿಸಿ ಬಂದ ಕೇರಳ ರಾಜ್ಯದ ಕಣ್ಣೂರು ನಿವಾಸಿ ಜಿಜೇಶ್.ಕೆ.ಜೆ(42) ಎಂಬಾತ ಹಲವು ಮಂದಿಯನ್ನು ಸಂಪರ್ಕ ಮಾಡಿಕೊಂಡು ಕಡಿಮೆ ದರದಲ್ಲಿ ಹೊಸ ಅಲ್ಟೋ ಕಾರು ಕೊಡಿಸುವುದಾಗಿ ನಂಬಿಸಿದ್ದರು.ಇದರಲ್ಲಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ಸೆಬಾಸ್ಟಿಯನ್ ಎ.ಎಮ್ (60) ಎಂಬವರ ಕೈಯಿಂದ 1,95,000 ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ. ಬಳಿಕ 2022 ರಲ್ಲಿ ಹಣ ಕೊಡುವುದಾಗಿ ಚೆಕ್ ನೀಡಿದಾಗ ಅದರ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಬೆಳಕಿಗೆ ಬಂದಿತ್ತು.

2023 ರಲ್ಲಿ ಸೆಬಾಸ್ಟಿಯನ್ ಬೆಳ್ತಂಗಡಿ ವಕೀಲರಾದ ಅಬಿನ್.ಪಿ.ಫ್ರಾಸಿಸ್ ಮೂಲಕ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣೆ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.ಪ್ರಕರಣದ ಬಗ್ಗೆ ಹಲವು ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಾದ- ಪ್ರತಿವಾದ ನಡೆಸಲಾಯಿತು. ಈ ವೇಳೆ ಆರೋಪಿ ತಪ್ಪಿತಸ್ಥನೆಂದು ವಿಚಾರಣೆಯಲ್ಲಿ ಸಾಬಿತುಗೊಂಡಿದ್ದರಿಂದ ನ್ಯಾಯಾಧೀಶರಾದ ಮನು.ಬಿ.ಕೆ ನ.27 ರಂದು ಶಿಕ್ಷೆ ಪ್ರಕಟ ಮಾಡಿದ್ದಾರೆ.

ಆರೋಪಿ ಜಿಜೇಶ್.ಕೆ.ಜೆ 1,95,000 ಹಣ ಮತ್ತು ವಾಷಿಕ 9% ಬಡ್ಡಿ ಸಮೇತ ದೂರುದಾರ ಸೆಬಾಸ್ಟಿಯನ್ ಅವರಿಗೆ ಪಾವತಿಸಬೇಕು, ತಪ್ಪಿದ್ದಲ್ಲಿ ಆರೋಪಿ ಜಿಜೇಶ್.ಕೆ.ಜೆ ಗೆ ಆರು ತಿಂಗಳ ಜೈಲು ವಾಸ ಅನುಭವಿಸತಕ್ಕದ್ದು ಎಂದು ನ್ಯಾಯಾಧೀಶರು ನ.27 ರಂದು ಆದೇಶ ಮಾಡಿದ್ದಾರೆ. ದೂರುದಾರ ಸೆಬಾಸ್ಟಿಯನ್ ಪರ ಬೆಳ್ತಂಗಡಿಯ ವಕೀಲರಾದ ಅಬಿನ್.ಪಿ.ಫ್ರಾಸಿಸ್ ವಾದಿಸಿದರು‌.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News