×
Ad

ಸೂರಲ್ಪಾಡಿ: ನೌಷಾದ್ ಹಾಜಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ

Update: 2023-12-26 23:08 IST

ಕೈಕಂಬ: ಸಮಾಜಿಕ ಮುಂದಾಳು ನೌಷಾದ್ ಹಾಜಿ ಅವರ ಸ್ಮರಣಾರ್ಥ ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ನೌಶಾದ್‌ ಹಾಜಿ ಅವರ ನಿವಾಸದ ವಠಾರದಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಆಸಿಫ್ ಆದರ್ಶ್ ಸುರಲ್ಪಾಡಿ, "ಪ್ರತಿ ವರ್ಷವೂ ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಯವರು ರಕ್ತದಾನ ಶಿಬಿರ ನಡೆಸುತ್ತಿದ್ದರು. ಈ ವರ್ಷ ಅವರ ಅನುಪಸ್ಥಿತಿಯಲ್ಲಿ ಅವರು ಹಾಕಿದ್ದ ಯೋಜನೆಯನ್ನು ನೌಷಾದ್ ಹಾಜಿ ಸೂರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕೈಗೆತ್ತಿಕೊಂಡು ಮುಂದುವರಿಸುತ್ತಿದೆ" ಎಂದರು.

ರಕ್ತದಾನ ಶಿಬಿರವು ನೌಷಾದ್ ಹಾಜಿ ಸುರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ ಮುಂದಾಳತ್ವದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇವರ ಸಹಕಾರದೊಂದಿಗೆ ದೇರಳಕಟ್ಟೆ ಯೆನಪೋಯ ಆಸ್ಪತ್ರೆ ವೈದ್ಯಾಧಿಕಾರಿಗಳ ಸಹಭಾಗಿತ್ವದಲ್ಲಿ ನೆರವೇರಿತು. ಶಿಬಿರದಲ್ಲಿ ಒಟ್ಟು 187 ಮಂದಿ ರಕ್ತದಾನ ಮಾಡಿದರು.

ಈ ಸಂದರ್ಭ ಬಂಬ್ರಾಣ ಉಸ್ತಾದ್, ಇರ್ಶಾದ್ ದಾರಿಮಿ ಮಿತ್ತಬೈಲ್, ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಮಿತ್ತಬೈಲ್, ಉಸ್ಮಾನ್ ಫೈಝಿ ತೋಡಾರ್, ಸಿರಾಜುದ್ದೀನ್ ಗಡಿಯಾರ್, ಬದ್ರುದ್ದೀನ್ ಅಝ್ಹರಿ ಕೈಕಂಬ, ರಫೀಕ್ ಹುದವಿ, ಎಸ್.ಬಿ. ದಾರಿಮಿ, ಹುಸೈನ್ ಫೈಝಿ ರೆಂಜಳಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಜೆಡಿಎಸ್‌ ಮುಖಂಡ ಮೊಯ್ದೀನ್ ಬಾವ, ಬ್ಲಡ್ ಹೆಲ್ಪ್ ಲೈನ್‌ ಕರ್ನಾಟಕ ಪದಾಧಿಕಾರಿಗಳಾದ ಸಿರಾಜುದ್ದೀನ್ ಪರ್ಲಡ್ಕ, ಮುನೀರ್ ನಡುಪಳ್ಳ, ಟ್ರಸ್ಟ್‌ ಉಪಾಧ್ಯಕ್ಷ ಲತೀಫ್ ಗುರುಪುರ, ಕಾರ್ಯದರ್ಶಿ ಡಾ. ಇ.ಕೆ.ಎ .ಸಿದ್ದೀಕ್ ಅಡ್ಡೂರು, ಕೋಶಾಧಿಕಾರಿ ಶಾಫಿ ಮುಲರಪಟ್ನ, ಸಲಹೆಗಾರರಾದ ಝಕರಿಯಾ ಜೋಕಟ್ಟೆ, ಅಸ್ಗರ್ ಹಾಜಿ ಡೆಕ್ಕನ್, ಉಸ್ಮಾನ್ ಹಾಜಿ ತೋಡಾರ್ ಸಿತಾರ್ ಮಜೀದ್ ಹಾಜಿ, ಫಕೀರಬ್ಬ ಮಾಸ್ಟರ್, ಸುಲೈಮಾನ್ ಶೇಖ್ ಬೆಳುವಾಯಿ, ಇಕ್ಬಾಳ್ ಬಾಳಿಲ, ರಫೀಕ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News