ಡಾ.ಎಂ.ಕೆ.ಅಬ್ದುಲ್ ಆರಿಸ್ ರಿಗೆ 'ಯುಎಇ ರಾಷ್ಟ್ರೀಯ ಪ್ರಶಸ್ತಿ – 2025'
Update: 2026-01-01 13:55 IST
ದುಬೈ: ವೈದ್ಯ ಮತ್ತು ಸಮಾಜ ಸೇವಕ ಡಾ.ಎಂ.ಕೆ.ಅಬ್ದುಲ್ ಆರಿಸ್ ಅವರು ವೆಸ್ಟ್ ವರ್ಲ್ಡ್ ಯುಕೆ ಲಿಮಿಟೆಡ್ ನ ಸಂಯುಕ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ(Co-CEO) ಮತ್ತು ಯುಎಇ ಆಡಳಿತ ಪ್ರಾಧಿಕಾರ ಜಂಟಿಯಾಗಿ ನೀಡುವ ಪ್ರತಿಷ್ಠಿತ 'ಯುಎಇ ರಾಷ್ಟ್ರೀಯ ಪ್ರಶಸ್ತಿ–2025'ಕ್ಕೆ ಭಾಜನರಾಗಿದ್ದಾರೆ.
ದುಬೈನ ಡಬಲ್ ಟ್ರೀ ಬೈ ಹಿಲ್ಟನ್ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಡಾ.ಎಂ.ಕೆ.ಅಬ್ದುಲ್ ಆರಿಸ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮೂಲತಃ ಬೆಳ್ತಂಗಡಿಯ ಪುತಿಲ ಗ್ರಾಮದ ಕುಂದಡ್ಕ ಮನೆ ನಿವಾಸಿಯಾಗಿರುವ ಡಾ.ಎಂ.ಕೆ.ಅಬ್ದುಲ್ ಆರಿಸ್ ಅವರು ಯುಎಇಯಲ್ಲಿ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಲ್ಲಿಸಿದ ವಿಶಿಷ್ಟ ವೈದ್ಯಕೀಯ ಮತ್ತು ಸಮಾಜ ಸೇವೆಯನ್ನೊಳಗೊಂಡ ಮಾನವೀಯ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.