×
Ad

ನ.9 ರಿಂದ ಮೇರಿಹಿಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ‘ಫೆಸ್ಟೆಂಬರ್’

Update: 2024-11-06 14:35 IST

ಮಂಗಳೂರು,ನ.6: ನಗರದ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನಲ್ಲಿ ‘ಎಂಸಿಸಿಎಸ್ ಫೆಸ್ಟೆಂಬರ್ 2ಕೆ24’ ನವೆಂಬರ್ 9 ಮತ್ತು 10ರಂದು ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಮತ್ತು ಪಿಟಿಎ ಅಧ್ಯಕ್ಷೆ ಸಿಸ್ಟರ್ ಮೆಲಿಸ್ಸಾ ಎ.ಸಿ. ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಶಾಲೆಯ ಪಿಟಿಎ ಆಶ್ರಯದಲ್ಲಿ ಆಯೋಜಿಸಲಾಗಿರುವ ಫೆಸ್ಟೆಂಬರ್‌ನಲ್ಲಿ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ರುಚಿಕರವಾದ ಆಹಾರ ಫಿಯೆಸ್ಟಾ, ವಿನೋದಾವಳಿ ಮತ್ತು ಲಕ್ಕಿ ಗೇಮ್‌ಗಳು, ಸ್ಪರ್ಧೆಗಳು, ನೃತ್ಯ, ಡಿಜೆ, ಸಂಗೀತ ಮತ್ತು ಪ್ರಸಿದ್ಧ ಕಲಾವಿದರಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಮೆಲ್‌ನ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅತ್ಯುತ್ತಮ ಸಾಧನೆಯು ಶಾಲೆಗೆ ವಿಶಾಲವಾದ ಆಟದ ಮೈದಾನವನ್ನು ನಿರ್ಮಿಸಲು ಆಡಳಿತ ಮಂಡಳಿಗೆ ಪ್ರೇರಣೆ ನೀಡಿತ್ತು ಎಂದರು.

ಇದೀಗ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಎರಡು ದಿನಗಳ ಫೆಸ್ಟೆಂಬರ್ ಆಯೋಜಿಸಲಾಗಿದೆ.ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳು ಅಂತರ್‌ರಾಷ್ಟ್ರೀಯ ಕ್ರೀಡಾಪಟುಗಳಾಗಿ ಬೆಳೆದು ತಮ್ಮ ಕನಸುಗಳನ್ನು ನನಸಾಗಿಸಿ, ಉಜ್ವಲ ಭವಿಷ್ಯದೊಂದಿಗೆ ತಮ್ಮ ಕುಟುಂಬ, ಶಾಲೆ ಮತ್ತು ದೇಶಕ್ಕೆ ಗೌರವವನ್ನು ತರುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ ಎಂದು ಸಿಸ್ಟರ್ ಮೆಲಿಸ್ಸಾ ಎಸಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಟಿಎ ಉಪಾಧ್ಯಕ್ಷೆ ಪ್ರೀಮ ಮರಿಯಾ ಡಿ ಕೋಸ್ತಾ, ರಕ್ಷಕ -ಶಿಕ್ಷಕ ಸಂಘದ ಸುಜಯ್ ಡಿ ಸಿಲ್ವಾ ಮತ್ತು ಶಿಕ್ಷಕಿ ಶಾಶ್ವತಿ ಜೆ.ಎನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News