×
Ad

ಕೈಕಂಬ: ಪೊಳಲಿ ದ್ವಾರದ ಬಳಿ ಖಾಸಗಿ ಬಸ್ ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

Update: 2024-01-02 20:25 IST

ಕೈಕಂಬ: ಇಲ್ಲಿನ‌ ಪೊಳಲಿ ದ್ವಾರದ ಬಳಿ ಖಾಸಗಿ ಬಸ್‌ವೊಂದು ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.

ಘಟನೆಯಿಂದ ಸುಮಾರು 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಖಾಸಗಿ ಬಸ್ ಶುಭಲಕ್ಷ್ಮೀ ಕೈಕಂಬದಿಂದ ಅಡ್ಡೂರು ಕಡೆ‌ ಸಂಚರಿಸುತ್ತಿದ್ದು, ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.‌

ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದ್ದಾರೆ.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News