×
Ad

ಕುಂದಾಪುರ: ಕಮರ್ಶಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ

Update: 2023-10-30 12:16 IST

ಕುಂದಾಪುರ: ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಕಮರ್ಶಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ರಾಜೇಶ್ ಬೆಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಸಲಾಗುತ್ತಿದ್ದು ಸೋಮವಾರ ಬೆಳಿಗ್ಗೆ ಕುಂದಾಪುರದ ಸಲೀಂ ಆಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ರಾಜೇಶ್ ಬೆಳ್ಕೆರೆ ಹಲವು ವರ್ಷದಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಏಕಕಾಲದಲ್ಲಿ ಈ ದಾಳಿ ನಡೆದಿದ್ದು ಉಡುಪಿಯಲ್ಲಿರುವ ಕಚೇರಿ ಹಾಗೂ ಅಂಕೋಲದಲ್ಲಿರುವ ಮನೆಯಲ್ಲಿ ತಪಾಸಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News