ಮಂಗಳೂರು | ಮೊಬೈಲ್ ನೋಡುತ್ತಲೇ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಕಾನೂನು ಕ್ರಮ: ಕಮಿಷನರ್
Update: 2023-07-24 15:52 IST
ಮಂಗಳೂರು, ಜು.24: ಮೊಬೈಲ್ ಫೋನ್ ನೋಡುತ್ತಲೇ ಬಸ್ ಚಲಾಯಿಸಿದ ಖಾಸಗಿ ಸಿಟಿ ಬಸ್ಸೊಂದರ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ನಗರದ ಸ್ಟೇಟ್ಬ್ಯಾಂಕ್ನಿಂದ ತಲಪಾಡಿ ನಡುವೆ ಓಡಾಟ ನಡೆಸುವ ರೂಟ್ ನಂಬ್ರ 42ರ ಖಾಸಗಿ ಸಿಟಿ ಬಸ್ಸೊಂದರ ಚಾಲಕನೊಬ್ಬ ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅದನ್ನು ನೋಡುತ್ತಲೇ ಬಸ್ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಬಸ್ಸನ್ನು ಪತ್ತೆ ಹಚ್ಚಿ ಅದರ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಆತನ ಡ್ರೈವಿಂಗ್ ಲೆಸೆನ್ಸ್ ಅನ್ನು ರದ್ದುಗೊಳಿಸಲು ಆರ್.ಟಿ.ಒ.ಗೆ ಕಳುಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.