×
Ad

ಜಪ್ಪಿನಮೊಗರು ದ್ರವತ್ಯಾಜ್ಯ ಸಂಸ್ಕರಣಾ ಘಟಕದ ಸಮಸ್ಯೆ ಬಗೆಹರಿಸಲು ಶಾಸಕ ಐವನ್ ಡಿ ಸೋಜರಿಗೆ ಸ್ಥಳೀಯರ ಆಗ್ರಹ

Update: 2025-11-14 18:35 IST

ಮಂಗಳೂರು, ನ.14: ಜಪ್ಪಿನಮೊಗರು ಕಡೇಕಾರ್ ಬಳಿ ಮಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ ದ್ರವತ್ಯಾಜ್ಯ ಸಂಸ್ಕರಣಾ ಘಟಕದಿಂದ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.

ಶಾಸಕ ಐವನ್ ಡಿ ಸೋಜ ಅವರು ಸ್ಥಳಕ್ಕೆ ಭೇಟಿ ಸ್ಥಳೀಯರಿಂದ ಮಾಹಿತಿ ಪಡೆದರು.

ಸಾರ್ವಜನಿಕರು ಪ್ರತಿದಿನ 50ರಿಂದ 60ಟ್ಯಾಂಕರ್‌ಗಳ ಮುಖಾಂತರ ನಗರದ ಹೊರವಲಯದಿಂದ ತಂದು ತುಂಬಿಸುವ ಬಗ್ಗೆ ಹಾಗೂ ಹಾಗೂ ಪರಿಸರವು ದುರ್ನಾತದಿಂದ ವಾಸಿಸಲು ತೊಂದರೆಯಾಗುವ ಬಗ್ಗೆ ತಿಳಿಸಿದರು.

ಆಯುಕ್ತರ ಭರವಸೆ :

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಅಯುಕ್ತ ರವಿಚಂದ್ರ ನಾಯಕ್ ಹಾಗೂ ಉಪಅಯುಕ್ತ ನರೇಶ್ ಶೆಣೈ ಅವರನ್ನು ಕಚೇರಿಗೆ ಕರೆಸಿ ಜಪ್ಪಿನಮೊಗರು ಕಡೇಕಾರ್ ಬಳಿ ಮಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ ದ್ರವತ್ಯಾಜ್ಯ ಸಂಸ್ಕರಣಾ ಘಟಕದಿಂದ ಆಗುತ್ತಿರುವ ಸಮಸ್ಯೆಯ ಪರಿಹಾರದ ಬಗ್ಗೆ ಮಾತುಕತೆ ನಡೆಸಿದರು. ಈ  ಸಂದರ್ಭದಲ್ಲಿ ಆಯಕ್ತರು ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಸ್ಥಳೀಯ ಮುಖಂಡರಾದ ಸುಧಾಕರ್ ಜೆ. ಅನಿಲ್ ಡಿ ಸೋಜ, ಸಂತೋಷ್ ಕಡೇಕಾರ್ ಐವನ್ ರೋಸಾರಿಯೊ, ರೀನಾ ಡಿ ಸೋಜ , ವಿದ್ಯಾ ಡಿ ಸೋಜ,ಮೇರಿ ಡಿ ಸೋಜ, ಲತಾ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News