×
Ad

ಮಂಗಳೂರು: ಕಳವಿಗೆ ಹೊಂಚು ಆರೋಪ; ಯುವಕ ಸೆರೆ

Update: 2023-08-05 22:30 IST

ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯ ಅಂಗಡಿಗಳ ಬಾಗಿಲು ಮುರಿದು ಕಳವಿಗೆ ಹೊಂಚು ಹಾಕುತ್ತಿದ್ದ ಯುವಕನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಸಾಸ್ತಾನ ನಿವಾಸಿ ಪ್ರಹ್ಲಾದ್ ಪೂಜಾರಿ (29) ಬಂಧಿತ ಆರೋಪಿ.

ಆ.5ರಂದು ಮುಂಜಾನೆ 5.15ರ ವೇಳೆಗೆ ಬಂದರು ಠಾಣೆಯ ಎಎಸ್ಸೈ ದಾಮೋದರ್ ರಾತ್ರಿ ಗಸ್ತಿನಲ್ಲಿದ್ದಾಗ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಆರೋಪಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ ಅಂಗಡಿಗಳ ಬೀಗ ಮುರಿದು ಕಳವಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಂಧಿಸಿ ಕಾನೂನು ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News