×
Ad

ಮಂಗಳೂರು :ಎನ್ಎಮ್ಎಸ್ ಪ್ರಾಯೋಜಕತ್ವದ ಚಾಂಪಿಯನ್ಸ್ ಲೀಗ್ - 2024

Update: 2024-10-14 16:56 IST

ಮಂಗಳೂರು :ಎನ್ ಎಮ್ ಎಸ್ ಪ್ರಾಯೋಜಕತ್ವದ ಚಾಂಪಿಯನ್ಸ್ ಲೀಗ್ - 2024 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟವು ನಗರದ ಕಂದಕ್ ಗಲ್ಲಿ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಿದ್ದು ಫೈನಲ್ ಪಂದ್ಯದಲ್ಲಿ ರಿಜ್ವಾನ್ ನಾಯಕತ್ವದ ಕಂದಕ್ ವಿಕ್ಟ್ರಿ ವೈಪರ್ಸ್ ತಂಡ ತಾಹಿರ್ ನೇತೃತ್ವದ ಕಂದಕ್ ಸೂಪರ್ ಗೈಂಟ್ಸ್ ವಿರುದ್ಧ 10 ರನ್‌ ಗಳಿಂದ ಜಯ ಗಳಿಸಿ ಎರಡನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪಂದ್ಯಾಕೂಟದಲ್ಲಿ ಫೈನಲ್‌ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜಾಫರ್ ಸಾದಿಕ್, ಉತ್ತಮ ದಾಂಡಿಗನಾಗಿ ಇಸ್ಮಾಯಿಲ್, ವಿಕೆಟ್ ದಾರನಾಗಿ ತಾಹಿರ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅನ್ವಾಜ್ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಉದ್ಯಮಿಗಳಾದ ಶರೀಫ್, ಫೈಝಲ್, ನಾಸೀರ್ ಬೋಳಾರ್, ಸಾಲಿ, ಅಬ್ಬಾಸ್ ಉಳ್ಳಾಲ ಮತ್ತು ಪಂದ್ಯಕೂಟದ ರೂವಾರಿ ಮುಸ್ತಫಾ ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News