ಮಂಗಳೂರು: ಕೆಸಿಸಿಐ ನೂತನ ಅಧ್ಯಕ್ಷ ಅಹ್ಮದ್ ಮುದಸ್ಸರ್‌ಗೆ ಅಭಿನಂದನಾ ಕಾರ್ಯಕ್ರಮ
ಮಂಗಳೂರು: ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ) ನೂತನ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಅವರಿಗೆ ದುಬೈನ ಗಡಿಯಾರ್ ಗ್ರೂಪ್ ಆಫ್ ಕಂಪನೀಸ್ ನ ಅಧ್ಯಕ್ಷ ಇಬ್ರಾಹೀಂ ಗಡಿಯಾರ್ ಅವರ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ನಡೆಯಿತು.
ನ್ಯಾಶನಲ್ ಅಲೈಡ್ ಹೆಲ್ತ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಅಲಿ ಮಾತನಾಡಿ, ಮಂಗಳೂರಿನಲ್ಲಿ ನೂತನವಾಗಿ ಐಟಿ ಪಾರ್ಕ್ ಮತ್ತು ಕೈಗಾರಿಕಾ ಘಟಕಗಳು ತಲೆ ಎತ್ತಲಿದ್ದು, ಈ ಸಂದರ್ಭದಲ್ಲಿ ಪಿ.ಬಿ. ಅಹ್ಮದ್ ಮುದಸ್ಸರ್ ಅವರು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷರಾಗಿ ನೇಮಕವಾದದ್ದು ತುಂಬಾ ಸಂತೋಷವಾಗಿದೆ. ಅವರ ಅಧಿಕಾರವಧಿಯಲ್ಲಿ ಮಂಗಳೂರು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಮಾಜಿ ಶಾಸಕ ಮೊಯ್ದಿನ್ ಬಾವ, ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್, ಗಡಿಯಾರ್ ಗ್ರೂಪ್‌ನ ಚೇರ್ಮನ್ ಇಬ್ರಾಹೀಂ ಗಡಿಯಾರ್, ಹೈದರ್ ಪರ್ತಿಪಾಡಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿನ ಮಾಜಿ ಅಧ್ಯಕ್ಷ ಹಾಗು ಹಾಲಿ ಅಧ್ಯಕ್ಷ ಅಹ್ಮದ್ ಮುದಸ್ಸರ್ ಅವರ ತಂದೆ ಪಿ.ಬಿ. ಅಬ್ದುಲ್ ಹಮೀದ್ ಮತ್ತು ಹಲವು ಗಣ್ಯರು ಭಾಗವಹಿಸಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.