×
Ad

ಮಂಗಳೂರು, ದೇರಳಕಟ್ಟೆ: ನಾಲ್ಕು ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ

Update: 2025-07-19 18:36 IST

ಮಂಗಳೂರು: ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಮಂಗಳೂರಿನ ಮೂರು ಹಾಗೂ ದೇರಳಕಟ್ಟೆಯ ಒಂದು ಖಾಸಗಿ ಕ್ಲಿನಿಕ್‌ಗಳ ಮೇಲೆ ದ.ಕ.ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ಶನಿವಾರ ದಾಳಿ ನಡೆಸಿದೆ.

ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್ (ಕೆಪಿಎಂಇ) ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಿಗೆ ನವೀಕರಿಸದ, ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ನಗರದ ಹಂಪನಕಟ್ಟೆ, ಪಳ್ನೀರ್ ಪರಿಸರದ ಮೂರು ಕ್ಲಿನಿಕ್‌ಗಳು ಹಾಗೂ ದೇರಳಕಟ್ಟೆಯ ಒಂದು ಕ್ಲಿನಿಕ್ ಮೇಲೆ ದಾಳಿ ಮಾಡಲಾಯಿತು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.

ದೇರಳಕಟ್ಟೆಯ ಪ್ರಯೋಗಾಲಯವು ಯಾವುದೇ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಈ ಹಿಂದೆಯೇ ನೊಟೀಸ್ ಜಾರಿಗೊಳಿಸಿ ಸೂಕ್ತ ಪರವಾನಿಗೆಗಳನ್ನು ಪಡೆಯಲು ಸೂಚಿಸಲಾಗಿತ್ತು. ಅಲ್ಲದೆ ಪರವಾನಿಗೆ ನವೀಕರಿಸುವವರೆಗೆ ಕ್ಲಿನಿಕ್ ಮುಚ್ಚುವಂತೆ ತಿಳಿಸಿದ್ದೆವು. ಅದನ್ನು ಉಲ್ಲಂಘಿಸಿ ಬಾಗಿಲು ತೆರೆದ ಕಾರಣ ಇಂದು ದಾಳಿ ಮಾಡಿ ಬೀಗಮುದ್ರೆ ಜಡಿಯಲಾಯಿತು ಎಂದು ತಿಳಿಸಿದ್ದಾರೆ.

ಈ ಸಂದರ್ಭ ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ. ಚಿರಾಗ್ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News