×
Ad

ಡಿ. 17 ರಿಂದ ಮಂಜನಾಡಿ ಉರೂಸ್; ಧಾರ್ಮಿಕ, ರಾಜಕೀಯ ಪ್ರಮುಖರು ಭಾಗಿ

Update: 2025-10-14 13:07 IST

ಕೊಣಾಜೆ: ಸುಮಾರು 800 ವರ್ಷಗಳ ಇತಿಹಾಸ ಇರುವ ಮಂಜನಾಡಿ ಜುಮಾ ಮಸೀದಿಯಲ್ಲಿ,  300 ವರ್ಷಗಳಿಂದ ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವಂತಹ ಅಸ್ಯಯ್ಯದ್ ಇಸ್ಮಾಯಿಲ್ ವಲಿಯುಲ್ಲಾಹಿ ಬುಖಾರಿ ತಂಙಳ್‌ ಅವರ ಹೆಸರಿನಲ್ಲಿ, ಸುಮಾರು 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತಹ ಉರೂಸ್ ಕಾರ್ಯಕ್ರಮವು ಡಿ. 17 ರಿಂದ 27 ವರೆಗೆ ಮಂಜನಾಡಿ ಕೇಂದ್ರ ಜುಮಾ ಮಸೀದಿಯಲ್ಲಿ  ಗೌರವಾಧ್ಯಕ್ಷ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್‌ರವರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪಾಡಿ ತಿಳಿಸಿದ್ದಾರೆ.

ಅವರು ಮಂಜನಾಡಿ‌ ಜುಮಾ ಮಸೀದಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಢಿಯಲ್ಲಿ ಈ ಕುರಿತು ಮಾತನಾಡುತ್ತಾ, ಈ 11 ದಿನಗಳ ಕಾರ್ಯಕ್ರಮದಲ್ಲಿ ಪ್ರಮುಖ ಸಯ್ಯಿದರು, ವಿದ್ವಾಂಸರು, ವಾಗ್ಮಿಗಳು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.

ರಾಜ್ಯ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ , ಸಚಿವ ಝಮೀರ್ ಅಹ್ಮದ್ ಖಾನ್, ದ.ಕ. ವಕ್ಫ್ ಅಧಿಕಾರಿ ಅಬೂಬಕ್ಕರ್ ಅವರು ಭಾಗವಹಿಸಲಿದ್ದಾರೆ. ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಸಯ್ಯದ್ ಜಿಫ್ರಿ ಮುತ್ತು ಕೋಯ ತಂಙಳ್, ಸಯ್ಯದ್ ಖಲೀಲ್ ತಂಙಳ್, ಸಯ್ಯಿದ್ ಅಶ್ರಪ್ ತಂಙಳ್ ಆದೂರು, ಸಯ್ಯದ್ ಅಮೀರ್ ತಂಙಳ್, ಸಯ್ಯದ್ ಶಹೀರ್ ತಂಙಳ್, ಸಯ್ಯದ್ ಮುಖ್ತಾರ್ ತಂಙಳ್, ಸಯ್ಯದ್ ಮಸೂದ್ ತಂಙಳ್, ಸಯ್ಯದ್ ಮಡವೂರ್ ಕೋಟ, ಸಯ್ಯದ್ ಅತ್ತಾವುಲ್ಲ ತಂಙಳ್, ಸಯ್ಯದ್ ಮುತ್ತನ್ನೂರು ತಂಙಳ್, ಶೈಖುನಾ ಅಬ್ದುಲ್ ಹಮೀದ್ ಮಾಣಿ ಉಸ್ತಾದ್, ಶೈಖುನಾ ವಾಲೆ ಮುಂಡೇವು ಉಸ್ತಾದ್, ಮಂಜನಾಡಿ ಮುದರಿಸ್ ಅಹ್ಮದ್ ಬಾಖವಿ ಉಸ್ತಾದ್ ಪ್ರಸಿದ್ದ ವಾಗ್ಮಿಗಳಾದ ಸಿರಾಜುದ್ದೀನ್ ಖಾಸಿಮಿ , ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ , ಫಾರೂಖ್ ನಈಮಿ ಉಸ್ತಾದ್, ವಲಿಯುದ್ದೀನ್ ಫೈಝಿ ನೂರೇ ಅಜ್ಮೀರ್, ಅಬ್ದುಲ್ ಲತೀಫ್ ಸಖಾಫಿ ಮದನೀಯಂ, ಹುಸೈನ್‌ ಸಖಾಫಿ ಚುಳ್ಳಿಕ್ಕೋಡ್‌, , ಅಬ್ದುಲ್ ಖಾದರ್ ಸಖಾಫಿ , ಖಲೀಲ್ ಹುದವಿ , ನೌಫಲ್ ಸಖಾಪಿ ಕಳಸ, ಸಿ. ಪಿ. ಅಹ್ಮದ್ ಸಖಾಫಿ ಉಸ್ತಾದ್ ಹಾಗೂ ಈ ಉರೂಸ್ ಕಾರ್ಯಕ್ರಮದಲ್ಲಿ ಹಲವಾರು ಶಾಸಕರು, ರಾಜಕೀಯ ಧುರೀಣರುವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದರು.

 ಸೌಹಾರ್ದ ಸಂಗಮ :

ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತಾಭಿಮಾನಿಗಳು ಆಗಮಿಸುತ್ತಾರೆ. ಕಳೆದ ಹಲವು ವರ್ಷದಿಂದ ಜಾತಿಮತ ಭೇದವಿಲ್ಲದೆ ಎಲ್ಲಾ ಮತೀಯ ಜನರು ಈ ಉರೂಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಈ ನಾಡಿನ ಮತೀಯ ಸಾಮರಸ್ಯತೆಗೆ ಬಹುದೊಡ್ಡ ಸಾಕ್ಷಿ.ಉರೂಸ್ ಕಾರ್ಯಕ್ರಮದ ಕೊನೆಯ ದಿನ ಜಾತಿಮತ ಭೇದವಿಲ್ಲದೆ ಅನ್ನದಾನ ಕಾರ್ಯಕ್ರಮ ಇರುವುದು ಎಂದು ಅಧ್ಯಕ್ಷರಾದ‌ ಅಬ್ದುಲ್ ಅಝೀಝ್ ಮೈಸೂರು ಬಾವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಉಪಾಧ್ಯಕ್ಷರಾದ‌ ಮೊದಿನ್ ಕುಟ್ಟಿ, ಆಲಿಕುಂಞಿ ಹಾಜಿ ಪಾರೆ, ಡಾ. ಮುನೀರ್ ಬಾವ ಹಾಜಿ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಜೊತೆ ಕಾರ್ಯದರ್ಶಿ ಹಮೀದ್ ಆರಂಗಡಿ, ಬಾಪಕುಂಞಿ,ಕುಂಞಿಬಾವ ಕಟ್ಟೆಮಾರ್, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮೊಹಮ್ಮದ್, ನರಿಂಗಾನ ಗ್ರಾ.ಪಂ.ಅಧ್ಯಕ್ಷರಾದ‌ ನವಾಝ್ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News