ಕೊಲ್ಲರಕೋಡಿಯಲ್ಲಿ ಮೀಲಾದ್ ಫೆಸ್ಟ್
ನರಿಂಗಾನ, ಸೆ. 30: ನೂರುಲ್ ಹುದಾ ಮಸ್ಜಿದ್ ತಖ್ವಾ, ನೂರುಲ್ ಉಲೂಮ್ ಮದರಸ, ಕೆಎಂಜೆ, ಎಸ್ ವೈ ಎಸ್, ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ಇದರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಮೌಲೀದ್ ಪಾರಾಯಣ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಮಜೀದ್ ಪಾರೆ ವಹಿಸಿದ್ದರು. ಕೊಲ್ಲರಕೋಡಿ ಮದರಸ ಸದರ್ ಮುಅಲ್ಲಿಂ ಯಾಕುಬ್ ಲತೀಫಿ ಮೌಲಿದ್ ಪಾರಾಯಣದ ನೇತೃತ್ವ ವಹಿಸಿದ್ದರು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಪ್ರಭಾಷಣ ಮಾಡಿದರು. ಬಳಿಕ ದುಆಗೈದರು.
ಈ ವೇಳೆ ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್ ಎಂ.ಬಿ ಹಾಗೂ ಮಜೀದ್ ಎನ್.ಎಂ, ಇಬ್ರಾಹಿಂ ಎನ್.ಐ ಅವರನ್ನು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಅಬ್ದುಲ್ ಖಾದರ್ ನಿಝಾಮಿ, ಮದರಸ ಮುಅಲ್ಲಿಂ ಅಲ್ ಹಾಫಿಲ್ ಅಬ್ದುಲ್ ನಾಸಿರ್ ಅಹ್ಸನಿ, ರಝಾಕ್ ಪಾರೆ, ಇಬ್ರಾಹಿಂ ಹಾಜಿ ಪಾರೆ, ಮೂಸ ಹಾಜಿ, ಇಬ್ರಾಹಿಂ ಅಹ್ಸನಿ, ಹಮೀದ್ ತಟ್ಲ, ಮಹಮ್ಮದ್ ಏನ್.ಐ, ಬಶೀರ್ ಎನ್.ಎಂ, ಆಸಿಫ್ ಕೆ.ಎಚ್, ಅನೀಸ್ ಬಲಪ್ಪು, ನೌಷಾದ್ ಎನ್.ಎಂ ಉಪಸ್ಥಿತರಿದರು.
ಕೊಲ್ಲರಕೋಡಿ ಮದರಸ ಸದರ್ ಯಾಕುಬ್ ಲತೀಫಿ ಕಾರ್ಯಕ್ರಮ ನಿರೂಪಿಸಿದರು.