×
Ad

ಉಪ್ಪಿನಂಗಡಿ | ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು

Update: 2023-11-02 00:38 IST

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ, ನ.1: ಬೈಕ್ ಹಾಗೂ ಇಕೊಮೆಟ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ನ.1ರಂದು (ಬುಧವಾರ) ರಾತ್ರಿ ರಾ.ಹೆ. 75ರ ನೆಲ್ಯಾಡಿ ಸಮೀಪ ವರದಿಯಾಗಿದೆ.

ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸುರೇಂದ್ರ ಮಹತೋ (35) ಮೃತಪಟ್ಟವರು ಎಂದು ತಿಳಿದು ಬಂದಿದೆ. 

ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಮಹತೋ ಬುಧವಾರ ರಂದು ರಾತ್ರಿ ಹೊಸಮಜಲು ಕಡೆಯಿಂದ ನೆಲ್ಯಾಡಿಗೆ ಬೈಕ್‌ ನಲ್ಲಿ ಬರುತ್ತಿದ್ದ ವೇಳೆ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಇಕೊಮೆಟ್ ಕೌಕ್ರಾಡಿ ಗ್ರಾ.ಪಂ.ನ ಮುಂಭಾಗ ಢಿಕ್ಕಿಯಾಗಿದೆ ಎನ್ನಲಾಗಿದೆ.

ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಸುರೇಂದ್ರ ಮೆಹತೋ ಅವರನ್ನು ತಕ್ಷಣ ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News