×
Ad

ನೆಲ್ಲಿಗುಡ್ಡೆ ನೂರುಲ್ ಹುದಾ ಜಮಾಅತಿನ ಖಾಝಿಯಾಗಿ ಖುರ್ರತುಸ್ಸಾದಾತ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ನೇಮಕ

Update: 2023-11-15 10:30 IST

ವಿಟ್ಲ :  ನೆಲ್ಲಿಗುಡ್ಡೆ  ನೂರುಲ್ ಹುದಾ ಜುಮಾ ಮಸೀದಿಯ ಖಾಝಿಯಾಗಿ ಶೈಖುನಾ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಸ್ಥಾನ ಅಲಂಕರಿಸಿದರು.

ಜಮಾಅತ್ ಸದಸ್ಯರ ಸಮ್ಮುಖದಲ್ಲಿ ಜಮಾಅತಿನ ಅಧ್ಯಕ್ಷ ಅಬೂಬಕರ್ ಬೈಅತ್ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿ ಗೌರವ ವಸ್ತ್ರವನ್ನು ತೊಡಿಸಲಾಯಿತು.

ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದ್ ಶಿರವಸ್ತ್ರ ಧಾರಣೆ ನೇರವೇರಿಸಿದರು, ಖಾಝಿ ಸ್ವೀಕಾರ ಅಂಗೀಕಾರ ಪತ್ರವನ್ನು ಖಾಝಿಯವರಿಂದ ಜಮಾಅತಿನ ಪ್ರತಿನಿಧಿಗಳು ಸ್ವೀಕರಿಸಿದರು.


ಖಾಝೀ ಸ್ಥಾನದ ಗೌರವದ ಕುರಿತು ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದ್ ಮಾಹಿತಿ ನೀಡಿದರು.

ಖಾಝೀ ಸ್ಥಾನವನ್ನು ಸ್ವೀಕರಿಸಿದ ಶೈಖುನಾ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಮಾತನಾಡಿ, ಖಾಝಿ ಎಂಬುವುದು ಅತೀ ಜವಾಬ್ದಾರಿಯುತವಾದ ಒಂದು ಹುದ್ದೆಯಾಗಿದ್ದು, ಅದರ ಪಾವಿತ್ರ್ಯತೆಗೆ ಚ್ಯುತಿ ಬಾರದಂತೆ ನಡೆದು ಕೊಳ್ಳುವುದು ಜಮಾಅತಿನ ಸರ್ವರ ಬಾಧ್ಯತೆಯಾಗಿದೆ ಎಂದರು.

ಸಹಾಯಕ ಖಾಝಿಯಾಗಿ ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೊವು ಉಸ್ತಾದ್ ಅವರನ್ನು ನೇಮಿಸಿ ಗೌರವಿಸಲಾಯಿತು.


ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಶಬೀರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಬೇಗ್, ಕೋಶಾಧಿಕಾರಿ ಮುಹಮ್ಮದ್, ಮದರಸ ಮುಖ್ಯ ಶಿಕ್ಷಕ ಹುಸೈನ್ ಸಅದಿ ಕುಕ್ಕಿಲ, ಬಶೀರ್ ಮದನಿ, ಅದ್ರಾಮ ಕೊಪ್ಪಳ, ಹಸೈನಾರ್, ಖಾದರ್ , ಹಂಝತ್, ಇಬ್ರಾಹಿಂ ಹಾಜಿ, ಝುಬೈರ್ ಪೆರ್ಲಂಪಾಡಿ, ಕುಂಞಿಮೋನು, ಯಾಕುಬ್ ಸಾಹೇಬ್, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಹಸೈನಾರ್, ಹನೀಫ್ ಎನ್.ಕೆ, ರಫೀಕ್ ಹಿಮಮಿ, ರಫೀಕ್ ಮುಸ್ಲಿಯಾರ್, ಹಕೀಂ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.

ಸ್ಥಳೀಯ ಖತೀಬ್ ಉನೈಸ್ ಸಖಾಫಿ ಅಲ್ ಅಫ್ಲಲಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News