×
Ad

ನಿಟ್ಟೆಯಲ್ಲಿ ಸಂಭ್ರಮದ ಝೆನ್ಕೆನ್ ದಿನಾಚರಣೆ

Update: 2023-12-10 22:03 IST

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್, ಸ್ಟೂಡೆಂಟ್ ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗವು ಜಪಾನ್ ಮೂಲದ ಝೆನ್ಕೆನ್ ಸಂಸ್ಥೆಯ ಭಾರತದ ವಿಭಾಗದ ಸಹಯೋಗ ದೊಂದಿದೆ ನಿಟ್ಟೆ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಝೆನ್ಕೆನ್ ದಿನವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮವನ್ನು ಎರಡು ಸೆಷನ್ ಗಳಾಗಿ ವಿಂಗಡಿಸಲಾಗಿತ್ತು. ಪ್ರಥಮ ಮತ್ತು ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಕಾರ್ಯಕ್ರಮ ಮತ್ತು 3 ನೇ ವರ್ಷದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅಧಿವೇಶನವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕೌನ್ಸೆಲಿಂಗ್, ಸ್ಟೂಡೆಂಟ್ ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಝೆನ್ಕೆನ್ ಕಾರ್ಪರೇಶನ್ ಸಂಸ್ಥೆಯ ಆಪರೇಶನ್ಸ್ ಮ್ಯಾನೇಜರ್ ಅಭಿಷೇಕ್ ಎಸ್.ಎನ್ ಹಾಗೂ ಜಪಾನೀಸ್ ಲ್ಯಾಂಗ್ವೇಜ್ ಟ್ರೈನರ್ ತಕಕೊ ಇಮಮುರ ಉದ್ಘಾಟಿಸಿದರು.

ಅಭಿಷೇಕ್ ಎಸ್ ಎನ್ ಅವರು ನಿಟ್ಟೆ ಕಾಲೇಜಿನಲ್ಲಿ ಮಾಡಿದ ಸಿದ್ಧತೆಗಳಿಂದ ಪ್ರಭಾವಿತರಾಗಿದ್ದರಿಂದ ಸಂತೋಷ ವ್ಯಕ್ತಪಡಿಸಿದರು ಮತ್ತು ಉದ್ಯೋಗ ಚಟುವಟಿಕೆಗಳ ಬಗ್ಗೆ ಅವರು ಪಡೆದ ಬೆಂಬಲಕ್ಕಾಗಿ ಸಂಸ್ಥೆಗೆ ವಂದಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ಉಪಪ್ರಾಂಶುಪಾಲ ಮತ್ತು ಡೀನ್ ಡಾ. ಐ. ಆರ್.ಮಿತ್ತಂಥಾಯ, ಉಪಪ್ರಾಂಶುಪಾಲ ಮತ್ತು ಪರೀಕ್ಷಾ ನಿಯಂತ್ರಕ ಡಾ.ಶ್ರೀನಿವಾಸ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃಷ್ಣ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಅನಂತರ ಅಭಿಷೇಕ್ ಎಸ್ ಎನ್ ಅವರು ಜಪಾನ್ ನಲ್ಲಿನ ಉದ್ಯೋಗಾವಕಾಶಗಳು, ಅಲ್ಲಿನ ಸಂಸ್ಕೃತಿ, ಜಪಾನ್ ನಲ್ಲಿನ ಜೀವನ, ಜಪಾನಿನ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಪೂರ್ವಾಪೇಕ್ಷಿತಗಳು ಮತ್ತು ವಿದ್ಯಾರ್ಥಿಗಳಿಗೆ ಜಪಾನ್ ನಲ್ಲಿ ಸಹಾಯ ಮಾಡಲು ಝೆನ್ಕೆನ್ ಒದಗಿಸುವ ಸೇವೆಗಳ ಬಗ್ಗೆ ವೃತ್ತಿ ಸೆಮಿನಾರ್ ನಡೆಸಿದರು. ಟಕಾಕೊ ಇಮಾಮುರಾ ವಿದ್ಯಾರ್ಥಿಗಳಿಗೆ ಜಪಾನೀಸ್ ಭಾಷೆಯಲ್ಲಿ ಮೂರು ಮೂಲಭೂತ ಶುಭಾಶಯಗಳನ್ನು ಕಲಿಸಿ ದರು. ವಿದ್ಯಾರ್ಥಿಗಳು ನಂತರ ಜಪಾನಿನ ಆಟದಲ್ಲಿ ಭಾಗವಹಿಸುವುದನ್ನು ಮತ್ತು ಸಾಂಪ್ರದಾಯಿಕ ಜಪಾನಿನ ಕಿಮೊನೊ ಉಡುಪು ಯುಕಾಟಾ ಧರಿಸುವುದನ್ನು ಆನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News