×
Ad

ಪುತ್ತೂರು: ಧರೆ ಕುಸಿದು ಮನೆಗೆ ಹಾನಿ; ಅಪಾಯದಿಂದ ಪಾರಾದ ಕುಟುಂಬ

Update: 2024-06-27 12:15 IST

ಪುತ್ತೂರು: ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡು, ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ನಡೆದಿದೆ.

ಪುತ್ತೂರು ತಾಲೂಕಿನೆಲ್ಲೆಡೆ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು, ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು ಮನೆ ಮಂದಿ ಮಲಗಿದ್ದ ಕೊಠಡಿಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆಯ ಅರ್ಧ ಭಾಗ ಕುಸಿದಿತ್ತು. ಈ ವೇಳೆ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಮನೆಯಲ್ಲಿದ್ದ ಉಳಿದವರು ಮಕ್ಕಳನ್ನು ಮಣ್ಣಿನಡಿಯಿಂದ ಹೊರಗೆಳೆದು ಅಪಾಯವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯರಾದ ಫಾತಿಮತ್ ಝುಹ್ರಾ, ಪಿ.ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು.ಎಸ್ ಮನೋಹ‌ರ್, ಆರ್. ಐ ಚಂದ್ರ ನಾಯಕ್ ಸಹಿತ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.  


Delete Edit


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News