×
Ad

ಡ್ರಗ್ಸ್ ಬಳಕೆ ತಡೆಗೆ ದ.ಕ. ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ನೋಡೆಲ್ ಅಧಿಕಾರಿ ನೇಮಿಸಲು ಸೂಚನೆ: ದಿನೇಶ್ ಗುಂಡೂರಾವ್

Update: 2025-06-18 22:26 IST

ಮಂಗಳೂರು: ಜಿಲ್ಲಾಡಳಿತ ಅಧಿಕಾರಿಗಳ ಸಭೆ ಡಗ್ಸ್ ಹಾವಳಿ ತಡೆಯ ಬಗ್ಗೆ ಸಭೆ ನಡೆದಿದೆ. ಮುಖ್ಯವಾಗಿ ವಿದ್ಯಾ ಸಂಸ್ಥೆ ಗಳನ್ನು ಸಂಪರ್ಕಿಸಿ ಅವರು ಈ ನಿಟ್ಟಿನಲ್ಲಿ ಕೈ ಜೋಡಿಸಲು ಸೂಚಿಸಲಾಗಿದೆ. ಡ್ರಗ್ಸ್ ಸರಬ ರಾಜು ಮಾಡುವವರ ವಿರುದ್ಧ ಕ್ರಮ,ನೋಡಲ್ ಅಧಿಕಾರಿಯನ್ನು ಪ್ರತಿ ವಿದ್ಯಾ ಸಂಸ್ಥೆ ಯಲ್ಲಿ ನೇಮಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಯುವಕರು ಯುವತಿಯರು ಈ ಜಾಲಕ್ಕೆ ಬಲಿ ಬೀಳದಂತೆ ಕ್ರಮ ಕೈಗೊಳ್ಳ ಲು ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಲಾಗಿದೆ .ಡ್ರಗ್ಸ್ ತಡೆಗೆ ಕ್ರಮ ಜೂನ್ 26ರಂದು ಈ ಬಗ್ಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

*ಮರಳು,ಕೆಂಪು ಕಲ್ಲು ಸಾಗಾಣಿಕೆಗೆ ಕಾನೂನು ಪ್ರಕಾರ ಇತರ ಜಿಲ್ಲೆಗಳಲ್ಲಿ ಇರುವ ಕಾನೂನು ಹಾಗೂ ಇಲ್ಲಿನ ಅವಕಾಶ ಗಳನ್ನು ಪರಿಶೀಲಿಸಿ ಪ್ರಸ್ತಾಪವನ್ನು ಸಲ್ಲಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮರಳುಗಾರಿಕೆಯ ಬಗ್ಗೆ ಸಿಆರ್ ಝೆಡ್ ನಿಯಮಗಳ ಮಿತಿಯಲ್ಲಿ ಪರಿಶೀಲಿಸಿ ಅನುಮತಿ ಪಡೆದು ಶೀಘ್ರ ವಾಗಿ ಸೂಕ್ತ ಕ್ರಮಗಳನ್ನು ಕಾನೂನು ಬದ್ಧವಾಗಿ ಕೈಗೊಳ್ಳಲು ಸೂಚಿಸಲಾಗಿದೆ ಈಗಾಗಲೇ ಕೆಲವು ಮರಳು ಬ್ಲಾಕ್ ಗುರುತಿಸಲಾಗಿದೆ ಎಂದು ಗುಂಡೂರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News