×
Ad

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಪೋಷಕರ ಕಾರ್ಯಾಗಾರ

Update: 2025-06-28 22:45 IST

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರಿಗಾಗಿ “ಆರ್ಟ್ ಆಫ್ ಪೇರೆಂಟಿಂಗ್” ಎಂಬ ಪೋಷಕರ ಮಾರ್ಗದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ಪೋಷಕರು ಮಕ್ಕಳ ಶಿಕ್ಷಣ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ಸಮರ್ಪಿತ ಸಮಯ ನೀಡಬೇಕು ಎಂದು ಸಲಹೆ  ನೀಡಿದರು.

ಶಾಲೆಯ ಅಧ್ಯಕ್ಷರಾದ ಫಾತಿಮಾ ನಸ್ರೀನ್ ಬಷೀರ್ ರವರು ಅಧ್ಯಕ್ಷೀಯ ಭಾಷಣ ನೀಡಿ, ನೂತನ ಪೋಷಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ನೌಷೀನ್ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಕಾರ್ಯಕ್ರಮದ ಉದ್ದೇಶ, ಪರಿಚಯ ಹಾಗೂ ಅತಿಥಿಗಳ ಪರಿಚಯ ಮಾಡಿಸಿ ಸ್ವಾಗತಿಸಿ ಮಾತನಾಡಿದರು.

ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಅವರು ಶಾಲೆಯ ಮೂಲ ನಿಯಮಾವಳಿಗಳ ಬಗ್ಗೆ ವಿವರ ನೀಡಿ, ಧನ್ಯವಾದಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.

ಚಾರಿಷ್ಮಾ ಮತ್ತು ಆಶುರಾ ಬೀವಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿದರು. ಪೋಷಕರು ಹಾಗೂ ಶಿಕ್ಷಕ–ಬೋಧಕ, ಶಿಕ್ಷಕೇಕರ ವೃಂದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News