ಪಡುಬಿದ್ರೆ : ಖಾಸಗಿ ಶಾಲೆಯ ಬಳಿ ಚಿರತೆ
ಪಡುಬಿದ್ರೆ: ಕಾರ್ಕಳ ರಸ್ತೆಯ ಖಾಸಗಿ ಶಾಲೆಯ ಬಳಿ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಸ್ಟಿಸಿದೆ.
ಕಳೆದ ವಾರ ದೀನ್‍ಸ್ಟ್ರೀಟ್‍ನಲ್ಲಿ ಚಿರತೆಯ ಚಲನವಲಗಳ ಬಗ್ಗೆ ತಿಳಿದುಬಂದಿದ್ದು, ಅರಣ್ಯ ಇಲಾಖೆ ಚಿರತೆಯ ಸೆರೆಗೆ ಬೋನು ಇರಿಸಿತ್ತು.
ಮನೆಯೊಂದರ ಪಕ್ಕದಲ್ಲಿ ಚಿರತೆಯ ಹೆಜ್ಜೆಗಳು ಕಂಡುಬಂದಿತ್ತು. ಈ ಹೆಜ್ಜೆ ಗುರುತುಗಳು ಚಿರತೆಯದ್ದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು. ಚಿರತೆಯೊಂದಿಗೆ ಎರಡು ಮರಿಗಳು ಇವೆ ಎಂಬುದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು. ಈ ಬಗ್ಗೆ ಹಲವು ಭಾರಿ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. ಅರಣ್ಯ ಇಲಾಖೆ ಬೋನನ್ನು ತಂದು ಇರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಮತ್ತೆ ಲಯನ್ಸ್ ಶಾಲೆಯ ಬಳಿ ಕಾಣಿಸಿಕೊಂಡಿರು ವುದು ಮತ್ತೆ ಆತಂಕ್ಕೆ ಕಾರಣವಾಗಿತ್ತು.
ಇದೀಗ ಮತ್ತೆ ಲಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಆವರಣದ ಪಕ್ಕದಲ್ಲಿ ಗುರುವಾರ ಸಂಜೆ ಹಾಗೂ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಈ ಭಾಗದ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಇಂದು ಬೆಳಗ್ಗೆ ಶಾಲೆಯ ಶಿಕ್ಷಕಿಯೊಬ್ಬರು ಶಾಲೆಗೆ ರಿಕ್ಷಾದಲ್ಲಿ ಬಂದಾಗ ಚಿರತೆಯೊಂದು ಕಾರ್ಕಳ ರಸ್ತೆಯನ್ನು ದಾಟಿ ಹೋಗಿರುವುದನ್ನು ರಿಕ್ಷಾ ಚಾಲಕ, ಶಾಲೆಯು ವಿದ್ಯಾರ್ಥಿ ಹಾಗೂ ಶಿಕ್ಷಕಿ ನೋಡಿದ್ದಾರೆ. ಮುಂಜಾನೆ ವಾಕಿಂಗ್ ಹೋಗಿದ್ದ ಸಂದರ್ಭ ಚಿರತೆ ಹಾಗೂ ಮರಿಯನ್ನು ಕಂಡಿರುವುದಾಗಿ ಹೇಳಿದ್ದಾರೆ.
ಈ ಸುದ್ದಿ ತಿಳಿದ ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡು ಶಾಲೆಗೆ ದೌಡಾಯಿಸಿ ವಿಚಾರಿಸಿದರು.
ಉಪವಲಯ ಅರಣ್ಯಾಧಿಕಾರಿ ಜೀವನದಾಸ್ ಶೆಟ್ಟಿ, ಗಸ್ತು ಅರಣ್ಯ ಪಾಲಕ ಅಭಿಲಾಷ್ ಎಸ್ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಸಂಚಾಲಕ ಗೋಪಾಲ ಶೆಟ್ಟಿ ಅವರಲ್ಲಿ ಮಾಹಿತಿ ಪಡೆದುಕೊಂಡರು.