ರೊನಾಲ್ಡ್ ಕೊಲಾಸೊ ಅವರಿಗೆ ಮಾತೃ ವಿಯೋಗ
ಮಂಗಳೂರು : ಅನಿವಾಸಿ ಭಾರತೀಯ ಉದ್ಯಮಿ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ (97) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಲಿಸ್ ಕೊಲಾಸೊ ಅವರು ದಿವಂಗತ ಸಂತಾನ್ ಪಿರೇರಾ, ದಿವಂಗತ ಅಸ್ಸಿಸ್ ಪಿರೇರಾ ಅವರ ಪುತ್ರಿ ಹಾಗೂ ದಿವಂಗತ ಫೇಬಿಯನ್ ಬಿ.ಎಲ್.ಕೊಲಾಸೊ ಅವರ ಪತ್ನಿ.
ಅವರು ಪುತ್ರ ಫ್ರೆಡ್ರಿಕ್ ಕೊಲಾಸೊ, ರೊನಾಲ್ಡ್ ಕೊಲಾಸೊ, ಜೋ ಕೊಲಾಸೊ ಹಾಗೂ ಪುತ್ರಿ ಲವೀನ ಅವರನ್ನು ಅಗಲಿದ್ದಾರೆ. ಅವರ ಇನ್ನೊಬ್ಬ ಪುತ್ರಿ ಜೆಸಿಂತಾ ಈ ಹಿಂದೆ ನಿಧನರಾಗಿದ್ದಾರೆ. ಮಂಗಳವಾರ, ಡಿ.2 ರಂದು ಬೆಳಗ್ಗೆ 10.00ಕ್ಕೆ ಬೆಂಗಳೂರಿನ ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. 11 ಗಂಟೆಗೆ ಅಂತಿಮ ಸಂಸ್ಕಾರದ ಪೂಜೆ ಪ್ರಾರಂಭವಾಗಲಿದೆ.
ಸ್ಪೀಕರ್ ಯು ಟಿ ಖಾದರ್ ಅವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್, ಸಚಿವ ದಿನೇಶ್ ಗುಂಡೂರಾವ್ ಸಹಿತ ಗಣ್ಯರು ಆಲಿಸ್ ಕೊಲಾಸೊ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.