×
Ad

ಪುತ್ತೂರು:‌ ಸೆ.21ರಂದು ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

Update: 2025-09-20 22:13 IST

ಪುತ್ತೂರು: ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ಪುತ್ತೂರು ನಗರದ ಹೊರ ವಲಯದ ಸಂಪ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯು ಸೆ.21 ರಂದು ಲೋಕಾರ್ಪಣೆ ಗೊಳ್ಳಲಿದೆ.

100 ಬೆಡ್‌ಗಳನ್ನು ಹೊಂದಿರುವ ಈ ನೂತನ ಆಸ್ಪತ್ರೆಯಲ್ಲಿ ಹಲವು ವೈದ್ಯರುಗಳ ಸೇವೆಯು ಒಂದೇ ಸೂರಿನಡಿ ಸಿಗಲಿದೆ. ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದ್ದು ಗುಣಮಟ್ಟದ ಸೇವೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಶೀಘ್ರದಲ್ಲೇ 24 ಗಂಟೆಗಳ ತುರ್ತು ಚಿಕಿತ್ಸೆ ಲಭ್ಯವಿರಲಿದೆ ಎಂದು ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್‌ಮೆನ್ ಡಾ.ಅಶ್ರಫ್ ಕಮ್ಮಾಡಿ ತಿಳಿಸಿದ್ದಾರೆ.

ನೂತನ ಆಸ್ಪತ್ರೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಒ.ಟಿ ಕಾಂಪ್ಲೆಕ್ಸ್ ನ್ನು ರಾಜ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಉದ್ಘಾಟಿಸಲಿದ್ದಾರೆ. ಶಾಸಕ ಅಶೊಕ್ ಕುಮಾರ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ದ.ಕ ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಹಾಗೂ ಐವನ್ ಡಿಸೋಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಸರಗೋಡು ದೇಲಂಪಾಡಿ ಜಿ.ಪಂ ಸದಸ್ಯ ಮುಹಮ್ಮದ್ ಶಫೀಕ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಎಸ್‌ಕೆವೈ ಹಾಸ್ಪಿಟಲ್ ಗ್ರೂಪ್ ಕಣ್ಣೂರು ಇದರ ಚೇರ್‌ಮೆನ್ ಡಾ.ವಸುದೇವನ್ ಟಿ.ಪಿ, ಬೆಂಗಳೂರು ಮಿಲನ್ ಪ್ಲೈವುಡ್ ನ ಮಿಲಪ್ ಚಂದ್ ಜೈನ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News