×
Ad

ಸಾರಿ ಪ್ಯಾಲೇಸ್‌ ನಲ್ಲಿ ನ.1ರವರೆಗೆ ವಿಶೇಷ ರಿಯಾಯಿತಿ

Update: 2023-10-29 19:06 IST

ಮಂಗಳೂರು: ಇಲ್ಲಿನ ಹೆಸರಾಂತ ಎಥ್ನಿಕ್‌ವೇರ್ ತಾಣವಾಗಿರುವ ಸಾರಿ ಪ್ಯಾಲೇಸ್‌ ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ಆರಂಭಗೊಂಡ ಬ್ರೈಡಲ್ ಎಕ್ಸ್ ಪೋ-2023 ನ.1ರವರೆಗೆ ಮುಂದುವರಿಯಲಿದೆ.

ಕೆ.ಎಸ್.ರಾವ್ ರಸ್ತೆಯಲ್ಲಿರುವ ಸಾರಿ ಪ್ಯಾಲೇಸ್‌ ವಧುವಿನ, ಉಡುಗೆಗಳ ಅತಿದೊಡ್ಡ ಮಳಿಗೆಯಾಗಿದ್ದು, ಒಂದೇ ಸೂರಿ ನಡಿ ವೈವಿಧ್ಯಮಯ ಸಂಗ್ರಹ ಲಭ್ಯವಿದೆ. ವಧು-ವರರಿಗೆ ವಿಶೇಷವಾದ 10 ದಿನಗಳ ಸಂಭ್ರಮಾಚರಣೆ ಒದಗಿಸುವ ಈ ಹಬ್ಬವನ್ನು ಲಯನ್ ಮಾಜಿ ಜಿಲ್ಲಾ ಗವರ್ನರ್ ಡಾ.ಕೃಪಾ ಅಮರ್ ಆಳ್ವ ಉದ್ಘಾಟಿಸಿದ್ದರು.

ಮಂಗಳೂರಿನಲ್ಲಿ 25 ವರ್ಷಗಳಿಂದ ವಿಶ್ವಾಸಾರ್ಹತೆಗೆ ಹೆಸರಾಗಿರುವ ಸಾರಿ ಪ್ಯಾಲೇಸ್‌ ಗುಣಮಟ್ಟ ಮತ್ತು ಅತ್ಯುತ್ತಮ ಗ್ರಾಹಕ ಸೇವೆಗೆ ಮಾದರಿಯಾಗಿ ನಿಂತಿದೆ. ಸೀರೆಗಳು, ಸಲ್ವಾರ್‌ಗಳು ವಧುವಿನ ಉಡುಗೆಗಳ ವ್ಯಾಪಕ ಸಂಗ್ರಹ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೈಮಗ್ಗದ ಸೀರೆಗಳಿಂದ ತೊಡಗಿ ಐಷಾರಾಮಿ ಕಾಂಚೀಪುರಂ ಸೀರೆಗಳ ವರೆಗೆ ಮತ್ತು ಸೊಗಸಾದ ಲೆಹೆಂಗಾಗಳು ಮತ್ತು ಗೌನ್‌ಗಳಿಂದ ಹಿಡಿದು ಡಿಸೈನರ್ ಸಲ್ವಾರ್‌ಗಳವರೆಗೆ ಆಯ್ಕೆಗಳನ್ನು ಪ್ರಸ್ತುತಪಡಿಸುತ್ತದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News