×
Ad

ಸೆ. 20 ರಿಂದ ಯುನಿವೆಫ್ ಕರ್ನಾಟಕ ವತಿಯಿಂದ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನ ಆರಂಭ

Update: 2024-09-19 09:26 IST

ಮಂಗಳೂರು:  2024 ಸೆಪ್ಟೆಂಬರ್ 20  ರಿಂದ ಡಿಸೆಂಬರ್ 20 ರ ವರೆಗೆ ಮೂರು ತಿಂಗಳ ಕಾಲ ನಡೆಯಲಿರುವ ಈ ವರ್ಷದ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಉದ್ಘಾಟನಾ ಸಮಾರಂಭವು 20 ಸೆಪ್ಟೆಂಬರ್ 2024 ರ ಶುಕ್ರವಾರ ಸಂಜೆ 6.45 ಕ್ಕೆ ಕಂಕನಾಡಿ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಅತುಲ್ ಫಲಾಹ್ ಹಾಲ್ ನಲ್ಲಿ ಜರಗಲಿದೆ.

ಮಂಗಳೂರಿನ ಶಾ ಅಮೀರ್ ಮಸೀದಿಯ ಖತೀಬ್ ಮೌಲಾನಾ ಮುಫ್ತಿ ರಿಯಾಝುಲ್ ಹಖ್ ರಶಾದಿ ಇವರು ಉದ್ಘಾಟನೆಯನ್ನು ನೆರವೇರಿಸಲಿರುವರು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ.

ಇದರ ಪ್ರಚಾರಾರ್ಥ ನಾಳೆ ಸಂಜೆ 5 ಗಂಟೆಗೆ ಫಳ್ನೀರ್ ಇಂದಿರಾ ಆಸ್ಪತ್ರೆ ಬಳಿ ಇರುವ ಲುಲು ಸೆಂಟರ್ ನಿಂದ ಕಂಕನಾಡಿ ಜಮೀಯತುಲ್ ಫಲಾಹ್ ಹಾಲ್ ವರೆಗೆ ಕಾಲ್ನಡಿಗೆ ಜಾಥಾ ಕೂಡಾ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಅಭಿಯಾನ ಸಂಚಾಲಕ ವಕಾಝ್ ಅರ್ಸಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News