ಗಾಣದಬೆಟ್ಟು ಶರೀಫ್
Update: 2026-05-29 23:08 IST
ಮಂಗಳೂರು: ಗಾಣದಬೆಟ್ಟು ನಿವಾಸಿ ಶರೀಫ್ ಗಾಣದಬೆಟ್ಟು (54) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಪತ್ನಿ, ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಮೃತರು ಅಗಲಿದ್ದಾರೆ.
*ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಕುಂಡಾಲ, ಹಮೀದ್ ಕಣ್ಣೂರು, ಸಿತಾರ್ ಮಜೀದ್ ಹಾಜಿ, ವಲಯ ಕಾಂಗ್ರೆಸ್ ಅಧ್ಯಕ್ಷ ಇ.ಕೆ. ರಫೀಕ್ ಕಣ್ಣೂರು, ವಲಯ ಎಸ್ಕೆಎಸ್ಸೆಸ್ಸೆಫ್ ಉಪಾಧ್ಯಕ್ಷ ಹಮೀದ್ ದಯಂಬು, ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ.