ಉಡುಪಿ, ಸೆ.5: ಬೈಲೂರು ನಿವಾಸಿ ಬಿ.ಗುರುರಾಜ ಆಚಾರ್ಯ(84) ಸೆ.4ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಉಡುಪಿಯ ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಜಿಲ್ಲೆಯ ನೂರಾರು ದೇವಾಲಯಗಳು ಹಾಗೂ ದೈವಸ್ಥಾನಗಳ ವಿಗ್ರಹಗಳಿಗೆ ಕರಾರುವಕ್ಕಾಗಿ ಅಳತೆ ತೆಗೆದು, ಬೆಳ್ಳಿ ಹಾಗೂ ಇತರ ಲೋಹಗಳ ಕವಚಗಳನ್ನು ನಿರ್ಮಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor