ಮಲ್ಲಾರು: ಶಿಕ್ಷಕ ಶಫಿ ಅಹ್ಮದ್ ನಿಧನ
ಕಾಪು: ಮಲ್ಲಾರು ನಿವಾಸಿ ಶಫಿ ಅಹ್ಮದ್ (75) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮಲ್ಲಾರು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ, ಮಲ್ಲಾರು ಜನರಲ್ ಶಾಲೆಯಲ್ಲಿ, ಕೈಪುಂಜಾಲ್ ಹಾಗೂ ತೊಟ್ಟಮ್ ನ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಫಿ ಅಹ್ಮದ್, ಜಮಾಆತೆ ಇಸ್ಲಾಮಿ ಹಿಂದ್ ಸದಸ್ಯರಾಗಿದ್ದು, ಕಾಪು ಶಾಖೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿ, ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ನಲ್ಲಿ ಜೊತೆ ಕಾರ್ಯದರ್ಶಿಯಾಗಿ ಸ್ಥಳೀಯ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗದವನ್ನು ಅಗಲಿದ್ದಾರೆ.