ಜಾರ್ಜ್ ಸಾಮ್ಯುಯೆಲ್

Update: 2026-08-22 20:53 IST

ಉಡುಪಿ, ಆ.22: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್(79) ಅಲ್ಪಕಾಲದ ಸೌಖ್ಯದಿಂದ ಇಂದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉದ್ಯಾವರ ಗುಡ್ಡೆಯಂಗಡಿಯ ನಿವಾಸಿಯಾಗಿದ್ದ ಇವರು, ಉದ್ಯಾವರ ಲಯನ್ಸ್ ಕ್ಲಬ್ ಸಕ್ರಿಯ ಸದಸ್ಯರಾಗಿದ್ದರು. ಲಯನ್ಸ್ ಜಿಲ್ಲೆ 317ಸಿ ಇದರ ಮಾಜಿ ಸಂಪುಟ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಸೌಹಾರ್ದ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News