ಲಕ್ಷ್ಮೀ ನಾರಾಯಣ ಉಪಾಧ್ಯಾಯ
ಮೂಡುಬಿದಿರೆ: ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮಿನಾರಾಯಣ ಉಪಾಧ್ಯಾಯ (94) ಸೆ.3ರಂದು ಅಲ್ಪ ಕಾಲದ ಅಸೌಖ್ಯದಿಂದ ಮೂಡು ಮಾರ್ನಾಡಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೂಡಬಿದಿರೆ, ಕಾರ್ಕಳ, ಬೆಳುವಾಯಿ ಪರಿಸರದ ಕುಟುಂಬ ಪುರೋಹಿತರಾಗಿ , ಅನೇಕ ಸಂಘ ಸಂಸ್ಥೆಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾರ್ಗದರ್ಶಕರಾಗಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು , ಶಿವಮೊಗ್ಗ ಮುಂತಾದ ಜಿಲ್ಲೆಗಳ ಅನೇಕ ಕಡೆಗಳ ದೇವಸ್ಥಾನ/ದೈವ ಸಾನ್ನಿಧ್ಯಗಳ ಪ್ರತಿಷ್ಠೆ, ಇತ್ಯಾದಿ ಪೂಜಾ ವಿನಿಯೋಗಾದಿ ಗಳ ಪ್ರಧಾನ ಪುರೋಹಿತರಾಗಿ, ಸಲಹಾಕಾರಾಗಿ ಜನಪ್ರಿಯರಾಗಿದ್ದರು.
ಪ್ರಗತಿಪರ ಕೃಷಿಕರೂ ಆಗಿದ್ದ ಅವರು ಪತ್ನಿ ಹಾಗೂ ಪುತ್ರರಾದ ಪಡುಮಾರ್ನಾಡು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷ ವಾಸುದೇವ ಉಪಾಧ್ಯಾಯ ಹಾಗೂ ಪುರೋಹಿತ ನರಸಿಂಹ ಉಪಾಧ್ಯಾಯ ಮತ್ತು ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.