ದೇವೇಂದ್ರ ನಾಯಕ್
ಶಿರ್ವ, ಸೆ.26: ಪಂಜಿಮಾರು ದೇವೇಂದ್ರ ನಾಯಕ್ (71) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪಂಜಿಮಾರು ಅಂಗಡಿ ದಿ.ಗೋವಿಂದ ವಾಗ್ಲೆ, ಚಂದ್ರಾವತಿ ದಂಪತಿ ಪುತ್ರರಾಗಿದ್ದು, ತಂದೆಯ ಉದ್ಯಮವನ್ನು ಮುಂದುವರಿಸಿದ್ದರು. ಇವರು ಹಲವು ವರ್ಷಗಳ ಕಾಲ ಉಡುಪಿ ಶ್ರೀಸೋದೆ ವಾದಿರಾಜ ಮಠದ ಹಿರಿಯ ಯತಿ ವರ್ಯರ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.