ಶೇಕ್ ಮುಹಮ್ಮದ್ ಇಸಾಕ್
ಮಂಗಳೂರು, ಸೆ.9: ನಗರದ ಅತ್ತಾವರದ ಕಾಪ್ರಿಗುಡ್ಡೆ ನಿವಾಸಿ ಶೇಕ್ ಮುಹಮ್ಮದ್ ಇಸಾಕ್(77) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮಂಗಳೂರು ಮಹಾನಗರಪಾಲಿಕೆಯ ಉದ್ಯೋಗಿ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, 2 ಪುತ್ರ, 1 ಪುತ್ರಿಯನ್ನು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.