ಪಡುಬಿದ್ರಿ: ಕನ್ನಂಗಾರ್ ಎನ್.ಎಸ್. ರಸ್ತೆಯ ನಿವಾಸಿ ಸಿರಾಜುದ್ದೀನ್ ಎನ್.ಎಸ್. (45) ಅವರು ಗುರುವಾರ ನಿಧನರಾದರು.

ಸುನ್ನಿ ಸಂಘ-ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಎಸ್ಸೆಸ್ಸೆಫ್ ಕನ್ನಂಗಾರ್ ಯುನಿಟ್ ಅಧ್ಯಕ್ಷರಾಗಿ ಆರು ವರ್ಷ ಹಾಗೂ ಪಡುಬಿದ್ರಿ ಸೆಕ್ಟರ್ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಎಸ್ಸೆಸ್ಸೆಫ್ ಕಾಪು ಡಿವಿಷನ್‌ನ ಮಾಜಿ ಸದಸ್ಯರಾಗಿದ್ದ ಅವರು, ಪ್ರಸ್ತುತ ಎಸ್‌ವೈಎಸ್ ಕನ್ನಂಗಾರ್ ಬ್ರಾಂಚ್‌ನ ಸದಸ್ಯರಾಗಿದ್ದರು.

ಕಳೆದ ಮೂರೂವರೆ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಸರಳ ಸ್ವಭಾವದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಜಬ್ಬಾರ್ ಸಖಾಫಿ ಪಾತೂರು ಸೇರಿದಂತೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ, ಕಾಪು ಡಿವಿಷನ್, ಪಡುಬಿದ್ರಿ ಸೆಕ್ಟರ್ ಹಾಗೂ ಎಸ್‌ವೈಎಸ್ ಕನ್ನಂಗಾರ್ ಬ್ರಾಂಚ್ ಸಂತಾಪ ಸೂಚಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor