ಕಡೆಕಾರು ರಾಘವೇಂದ್ರ ರಾವ್
ಉಡುಪಿ, ಅ.6: ಕಡೆಕಾರು ರಾಯರ ಮನೆತನದ ಕಡೆಕಾರು ರಾಘವೇಂದ್ರ ರಾವ್(86) ಸೋಮವಾರ ಕಡೆಕಾರಿನ ಸ್ವಗೃಹದಲ್ಲಿ ನಿಧನರಾದರು. ಶ್ರೀಕೃಷ್ಣಸೂಕ್ತಿ ಮಾಸಪತ್ರಿಕೆ ಪ್ರವರ್ತಕರಾಗಿದ್ದ, ಸಾಂಸ್ಕೃತಿಕ ಹರಿಕಾರರಾದ ಕಡೆಕಾರು ರಾಜಗೋಪಾಲಕೃಷ್ಣ ರಾವ್‌ರ ಮೊಮ್ಮಗನಾಗಿದ್ದ ರಾಘವೇಂದ್ರ ರಾವ್ ಪತ್ನಿ, ಪುತ್ರಿ, ಪುತ್ರ ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ನಿಡಂಬೂರು ಯುವಕ ಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.