×
Ad

ಮಣಿಪಾಲ: ಟೆರಸ್ ಮೇಲಿನಿಂದ ಬಿದ್ದು ಬಾಲಕ ಮೃತ್ಯು

Update: 2023-06-27 21:59 IST

ಮಣಿಪಾಲ, ಜೂ.27: ಮನೆಯ ಟೆರಸ್ ಮೇಲೆ ಆಟ ಆಡುತ್ತಿದ್ದಾಗ ಬಾಲಕನೋರ್ವ ಆಯತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ 80 ಬಡಗುಬೆಟ್ಟು ಗ್ರಾಮದ ದಶರಥ ನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಧಾರವಾಡ ಮೂಲದ ನಾಮದೇವ ಜಾಧವ್ ಎಂಬವರ ಮಗ ಆಯುಶ್(8) ಎಂದು ಗುರುತಿಸಲಾಗಿದೆ. ಇವರು ನಾಲಿಗೆಯ ಶಸ್ತ್ರ ಚಿಕಿತ್ಸೆಗಾಗಿ ಜೂ.21ರಂದು ಮಣಿಪಾಲಕ್ಕೆ ಬಂದು ದಶರಥ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜೂ.25ರಂದು ಮಧ್ಯಾಹ್ನ ವೇಳೆ ಆಯುಶ್ ಇತರ ಮಕ್ಕಳೊಂದಿಗೆ ಮನೆಯ ಟೆರಸ್ ಮೇಲೆ ಆಟ ಆಡುತ್ತಿದ್ದನು.

ಆಗ ಆಯತಪ್ಪಿ ಆಕಸ್ಮಿಕವಾಗಿ ಟೆರಸ್‌ನಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಆಯುಶ್, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಜೂ.26ರಂದು ಮಧ್ಯಾಹ್ನ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News