ಬಸವರಾಜ ಬೊಮ್ಮಾಯಿ

ಗದಗ(ಲಕ್ಷೇಶ್ವರ) : ‘ನಮ್ಮಲ್ಲಿರುವ ದೈತ್ಯ ಗುಣಗಳಾದ ಸಿಟ್ಟು ದ್ವೇಷ, ಅಸೂಯೆ ಅವುಗಳನ್ನು ಮನಸ್ಸಿನಿಂದ ತೊಡೆದು ಹಾಕುವ ಸಂಕಲ್ಪ ಮಾಡುವ ದಿನ. ನಮ್ಮಲ್ಲಿರುವ ದುಷ್ಟ ಗುಣಗಳನ್ನು ತೊಡೆದು ಹಾಕಿ ಅದರಲ್ಲಿ ವಿಜಯಶಾಲಿಗಳಾಗುವುದೇ ವಿಜಯದಶಮಿ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೋರ್ಟ್ ಸರ್ಕಲ್ ಹತ್ತಿರ ಇರುವ ಗ್ರಾಮದೇವಿ ದೊಡ್ಡ ದ್ಯಾಮವ್ವ ದೇವಿಯ ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಸಮಾರಂಭದಲ್ಲಿ ಭಾಗವಹಿಸಿ, ದೇವಿಯ ದರ್ಶನಾಶೀರ್ವಾದ ಪಡೆದುಕೊಂಡು ಮಾತನಾಡಿದರು. ಇಂದು ಶುಭದಿನ. ವಿಜಯ ದಶಮಿಯ ದಿನ ನಾವು ದೊಡ್ಡ ದ್ಯಾಮವ್ವನ ಜೀರ್ಣೋದ್ಧಾರದ ಹಲವು ಕಾರ್ಯಕ್ರಮ ಹಮ್ಮಿಕೊಂಡು ಸ್ತುತ್ಯವಾದ ಕೆಲಸ ಮಾಡಿದ್ದೀರಿ. ಹೀಗಾಗಿ ಆಡಳಿತ ಮಂಡಳಿಯ ಎಲ್ಲರಿಗೂ ಅಭಿನಂದನೆ ಎಂದು ಹೇಳಿದರು.

ನವರಾತ್ರಿಯ ಅಂತಿಮ ದಿನ ದಶಮಿಯ ದಿನ ಪವಿತ್ರ ದಿನ. ಒಂಭತ್ತು ದಿನ ದೇವಿಯ ಒಂದೊಂದು ಅವತಾರ ಇದೆ. ಅದರಲ್ಲಿ ಹಲವು ದೈತ್ಯರನ್ನು ಸಂಹಾರ ಮಾಡಿರುವುದು ಪುರಾಣದಲ್ಲಿದೆ. ದೈತ್ಯರನ್ನು ಸಂಹಾರ ಮಾಡಲು ಯಾರಿಂದಲೂ ಸಾಧ್ಯವಾಗದಿದ್ದಾಗ ತಾಯಿ ಬೇರೆ ಬೇರೆ ರೂಪದಲ್ಲಿ ಬಂದು ದೈತ್ಯರನ್ನು ಸಂಹಾರ ಮಾಡಿದ್ದಾಳೆ. ಪ್ರತಿ ವರ್ಷ ಮಾಡುವುದು ಮನುಷ್ಯ ಕಾಮ ಕೋಧ ಮದ ಮತ್ಸರದ ಸಂಕೋಲೆಯಲ್ಲಿ ಸಿಲುಕಿಕೊಳ್ಳುತ್ತೇವೆ. ಆಗ ದೇವಿಯನ್ನು ನೆನೆದು ತಾಯಿಯ ಆಶೀರ್ವಾದ ಪಡೆಯಬೇಕು ಎಂದು ಅವರು ಹೇಳಿದರು.

ಅಗಾಧವಾದ ಶಕ್ತಿ ರಾವಣನಿಗೂ ಇತ್ತು. ದೈತ್ಯರಿಗೂ ಇತ್ತು ಅವರ ವಿಚಾರದಲ್ಲಿ ದೋಷ ಇದ್ದಿದ್ದರಿಂದ ಅವರ ಸಂಹಾರ ಆಯಿತು. ಮನುಷ್ಯನಲ್ಲಿ ಸದ್ಗುಣ ಮತ್ತು ದುರ್ಗುಣ ಇವೆ. ಇವೆರಡೂ ನಮಗೆ ಬರಲು ಸಾಧ್ಯತೆ ಇದೆ. ಅಧಿಕಾರ ದುಡ್ಡು ಬಂದಾಗ ಅಹಂಕಾರ ದುರ್ಬುದ್ದಿ ಬರುತ್ತದೆ. ಅದೆಲ್ಲ ಭಗವಂತ ಕೊಟ್ಟಿದ್ದು ಅಂತ ಸದ್ಗುಣದಿಂದ ಜನರ ಸೇವೆ ಮಾಡಬೇಕು. ಹಣೆ ಬಹರ ಎಲ್ಲ ಸುಳ್ಳು ಒಳಗಿರುವ ಬುದ್ದಿ ನಮ್ಮ ಭವಿಷ್ಯ ಬರೆಯುತ್ತದೆ. ಹೀಗಾಗಿ ನಾವೆಲ್ಲ ದುಷ್ಟ ಶಕ್ತಿ ದೂರ ಮಾಡಿ ಶಿಷ್ಟ ಶಕ್ತಿಗೆ ತಲೆಬಾಗಿ ದೇವಿಯ ಸ್ತುತಿ ಮಾಡಿ ಪುನೀತರಾಗೋಣ ಎಂದರು.

ಗ್ರಾಮ ದೇವತೆ ಸಂತುಷ್ಟಳಾದರೆ ಗಾಮಕ್ಕೂ ಒಳ್ಳೆಯದಾಗುತ್ತದೆ. ಹಿಂದೆ ಮಾರಿ ರೋಗ ಬಂದಾಗ ಗ್ರಾಮ ದೇವತೆಗಳನ್ನು ಮಾಡುತ್ತಿದ್ದರು. ಸೀಮೆ ಕಾಯಲು ಸೀಮೆ ಬಸವಣ್ಣ ಇದ್ದಾನೆ. ಅವುಗಳ ಹಿಂದೆ ಅರ್ಥ ಇದೆ. ಅದನ್ನು ನಾವು ತಿಳಿದುಕೊಳ್ಳಬೇಕು. ಮುಕ್ತಿ ಮಂದಿರ ದೊಡ್ಡ ಕೇಂದ್ರವಾಗುತ್ತಿದೆ. ಮುಕ್ತಿ ಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಸ್ವಾಮಿಗಳ ಇಪ್ಪತ್ತು ವರ್ಷಗಳ ಶ್ರಮ ಈಗ ಕಾಲ ಕೂಡಿ ಬರುತ್ತಿದೆ ಎಂದರು.

ಕಲಾದಗಿ ಗುರುಗಳು ಇವರಿಗೂ ಬಹಳ ದೊಡ್ಡ ಸಂಬಂಧ ಇದೆ. ನನಗೂ ಮೂವತ್ತೈದು ವರ್ಷಗಳಿಂದ ಗುರುಗಳೊಂದಿಗೆ ಸಂಬಂಧ ಇದೆ. ಇವತ್ತು ನಮ್ಮ ಕಣ್ಣ ಮುಂದೆಯೇ ಲಿಂಗ ಸ್ಥಾಪನೆ ಮಾಡಿ ಅದ್ಭುತ ಕಾರ್ಯ ಮಾಡಿದ್ದಾರೆ. ನಾನು ನನ್ನ ಸಂಸದರ ನಿಧಿಯಿಂದ ಎರಡು ಕಂತಿನಲ್ಲಿ 20 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದರು.

ಹಿರಿಯರಾದ ಗಂಗಣ್ಣ ಮಹಾಂತಶೆಟ್ಟರ ಅವರೊಂದಿಗೆ ಉತ್ತಮ ಸಂಬಂಧ ಇದೆ. ಇವರಿಗೆ ಟಿಕೆಟ್‌ ಕೊಟ್ಟಿರಲಿಲ್ಲ. ನಮ್ಮ ತಂದೆಯ ಬಳಿಯೇ ಬಿ ಫಾರ್ಮ್ ಇವರಿಗೆ ಕೊಟ್ಟರೆ ನಾನು ಚುನಾಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದೆ. ಗಂಗಣ್ಣವರ ಮೇಲೆ ನಮ್ಮ ತಂದೆಗೆ ವಿಶೇಷವಾದ ಪ್ರೀತಿ ಇತ್ತು. ಇವರು ಕೆಲಸದಲ್ಲಿ ಬಹಳ ಮುಂದೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿ ತೊಗೊಂಡವರು ಜವಾಬ್ದಾರಿ ಮರಿಯಬಾರದು, ದುಡ್ಡು ಬಂಗಾರ ಎಲ್ಲಿಯೂ ಸೋರಬಾರದು ಎನ್ನುವುದು ಅವರ ತತ್ವ ಅದನ್ನು ಎಲ್ಲರೂ ಕಾಪಾಡುವ ವಿಶ್ವಾದ ಇದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor