ಕಾಣೆಯಾದ ಬೆಕ್ಕನ್ನು ಹುಡುಕಿಕೊಟ್ಟವರಿಗೆ 26.28 ಲಕ್ಷ ರೂ. ಬಹುಮಾನ ಘೋಷಿಸಿದ ಖತರ್ ನ ಕುಟುಂಬ!
Photo Credit : X \ @ken_mwanik
ದೋಹಾ: ಖತರ್ ನ ಕುಟುಂಬವೊಂದು ಕಾಣೆಯಾದ ತಮ್ಮ ಸಾಕು ಬೆಕ್ಕನ್ನು ಪತ್ತೆಹಚ್ಚಿ ಕೊಡುವವರಿಗೆ 1 ಲಕ್ಷ ಖತರ್ ರಿಯಾಲ್ (ಸುಮಾರು 26.28 ಲಕ್ಷ ರೂ.) ಬಹುಮಾನ ಘೋಷಿಸಿದೆ.
‘ರೆಕ್ಸ್’ ಎಂಬ 12ರಿಂದ 13 ವರ್ಷ ವಯಸ್ಸಿನ ಕಿತ್ತಳೆ ಬಣ್ಣದ ಗಂಡು ಬೆಕ್ಕು ಮಾರ್ಚ್ 21ರಂದು ಕೊನೆಯ ಬಾರಿ ಕಾಣಿಸಿಕೊಂಡಿತ್ತು. ಆರು ತಿಂಗಳಿಗೂ ಹೆಚ್ಚು ಸಮಯದ ಹಿಂದೆ ಅಲ್ ರಯಾನ್ನ ಮುರೈಖ್ ನಾರ್ತ್ ನ ಅಲ್ ಫುರುಸಿಯಾ ಬೀದಿಯಲ್ಲಿ ಅದು ಕಾಣೆಯಾಗಿತ್ತು ಎನ್ನಲಾಗಿದೆ.
ರೆಕ್ಸ್ ನ ಚಿತ್ರಗಳು ಹಾಗೂ ಬಹುಮಾನದ ಕುರಿತು ಪ್ರಕಟಿಸಲಾದ ಇತ್ತೀಚಿನ ಜಾಹೀರಾತು ಖತರ್ ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಕಾಣೆಯಾದ ಬೆಕ್ಕಿಗಾಗಿ ಸ್ಥಳೀಯವಾಗಿ ವ್ಯಾಪಕ ಹುಡುಕಾಟ ಆರಂಭವಾಗಿದೆ.
ಕಾಣೆಯಾದ ಸಾಕುಪ್ರಾಣಿಯನ್ನು ಪತ್ತೆಹಚ್ಚಲು ಕುಟುಂಬವು ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಘೋಷಿಸಿರುವುದು ಖತರ್ ನಲ್ಲಿ ಗಮನ ಸೆಳೆದಿದೆ.
QAR 100,000 reward. For a CAT. 🐈
— Kena Mwaniki (@ken_mwanik) September 20, 2026
Rex has gone missing in Al Rayyan, Qatar. That's roughly KES 3.5M for a ginger cat.
Read this before you start searching under every Parked car pic.twitter.com/kqas9RMGTM