ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ವತಿಯಿಂದ ಸಚಿವ ಯು.ಟಿ. ಖಾದರ್‌ರಿಗೆ ಅಭಿನಂದನೆ
Update: 2026-07-06 17:43 IST
ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ (BWF) ನಿಯೋಗ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಅವರ ನೇತೃತ್ವದಲ್ಲಿ ಕರ್ನಾಟಕದ ನೂತನ ಆರೋಗ್ಯ ಸಚಿವರಾಗಿ ನಿಯುಕ್ತಿಗೊಂಡ ಯು ಟಿ ಖಾದರ್ ಫರೀದ್ ಅವರನ್ನು ಭೇಟಿಯಾಗಿ ಶಾಲು ಹೊದಿಸಿ, ಅಭಿನಂದಿಸಿತು.
ಈ ಸಂದರ್ಭ BWF ತನ್ನ 20ನೇ ವರ್ಷದ ಸ್ಮರಣಾರ್ಥ ಹೊರ ತಂದ ಸ್ಮರಣ ಸಂಚಿಕೆ "ಸ್ಮೃತಿ ಚಿಲುಮೆ" ಬಿಡುಗಡೆಯನ್ನು ಅವರು ನೆರವೇರಿಸಿ ಶುಭ ಹಾರೈಸಿದರು.
ನಿಯೋಗದಲ್ಲಿ BWF ಪದಾಧಿಕಾರಿಗಳಾದ ರಫೀಕ್ ಕೃಷ್ಣಾಪುರ, ಮಹಮ್ಮದ್ ಕಲ್ಲಾಪು, ನವಾಝ್ ಉಚ್ಚಿಲ್, ಅನ್ಸಾರ್ ಬೆಳ್ಳಾರೆ ಮತ್ತು ಸೋಮೇಶ್ವರ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ಸಲಾಂ ಹಾಗು ಇತರರು ಉಪಸ್ಥಿತರಿದ್ದರು.