ಒಮನ್ | ಸಲಾಲಾ ಬ್ಯಾರಿ ಕಮ್ಯುನಿಟಿ ವತಿಯಿಂದ 'ಬೃಹತ್ ಆರೋಗ್ಯ ಶಿಬಿರ'

Update: 2026-07-17 23:34 IST

ಸಲಾಲಾ: ಸಲಾಲಾ ಬ್ಯಾರಿ ಕಮ್ಯುನಿಟಿ ಹಾಗೂ ಲೈಫ್‌ಲೈನ್ ಆಸ್ಪತ್ರೆ ಸಲಾಲಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 'ಬೃಹತ್ ಆರೋಗ್ಯ ಶಿಬಿರ' ಶುಕ್ರವಾರ ನಡೆಯಿತು.

ಶಿಬಿರದಲ್ಲಿ ಬ್ಯಾರಿ ಕಮ್ಯುನಿಟಿ ಸದಸ್ಯರು, ಕರ್ನಾಟಕ ಮೂಲದ ಅನಿವಾಸಿಗಳು ಹಾಗೂ ವಿವಿಧ ರಾಷ್ಟ್ರಗಳ ನಿವಾಸಿಗಳು ಸೇರಿದಂತೆ ಒಟ್ಟು 151 ಮಂದಿ ಉಚಿತ ವೈದ್ಯಕೀಯ ಸೇವೆಗಳ ಪ್ರಯೋಜನ ಪಡೆದರು.

ಕಾರ್ಯಕ್ರಮವು ಲತೀಫ್ ಸುಳ್ಯ ಹಾಗೂ ಇಕ್ಬಾಲ್ ನಾಟೆಕಲ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡಿತು. ಬಳಿಕ ಇಫ್ರಾ ಫಾರೂಕ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೈಫ್‌ಲೈನ್ ಆಸ್ಪತ್ರೆಯ ನಿರ್ದೇಶಕರಾದ ಅಬ್ದುಲ್ ರಶೀದ್, ಸಲಾಲಾ ಬ್ಯಾರಿ ಕಮ್ಯುನಿಟಿಯ ಅಧ್ಯಕ್ಷ ಸಿದ್ದೀಕ್, ಕಾರ್ಯದರ್ಶಿ ತಬ್ರೀಝ್ ಶೇಖ್, ರೀಗಲ್ ಮೆಡಿಕಲ್ ಕಾಂಪ್ಲೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸದಾಖಾ, ಸಲಾಲಾ ಬ್ಯಾರಿ ಕಮ್ಯುನಿಟಿಯ ಗೌರವಾಧ್ಯಕ್ಷ ಹಾಗೂ ಅಲ್ ನಜಾದ್ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ಕಡಬ ಹಾಗೂ ಕೆಸಿಎಫ್ ಸಲಾಲಾದ ಅಧ್ಯಕ್ಷ ಲತೀಫ್ ಭಾಗವಹಿಸಿದ್ದರು.

ಶಿಬಿರದಲ್ಲಿ ಲೈಫ್‌ಲೈನ್ ಆಸ್ಪತ್ರೆಯ ತಜ್ಞ ವೈದ್ಯರು ಸ್ವಯಂಪ್ರೇರಿತರಾಗಿ ವೈದ್ಯಕೀಯ ಸೇವೆ ಸಲ್ಲಿಸಿದರು. ಡಾ.ರವಿ ಕಿರಣ್ (ಸಾಮಾನ್ಯ ಶಸ್ತ್ರಚಿಕಿತ್ಸೆ), ಡಾ. ನಿಧಿನ್ (ಇಎನ್‌ಟಿ), ಡಾ. ಮೋನಿಷಾ (ಚರ್ಮರೋಗ), ಡಾ. ಸಫೀನಾ (ಸ್ತ್ರೀರೋಗ ಮತ್ತು ಪ್ರಸೂತಿ) ಹಾಗೂ ಡಾ. ಗೋಪಿನಾಥ್ (ವೈದ್ಯರು) ಆರೋಗ್ಯ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಿದರು. ವೈದ್ಯರ ಸೇವೆಯನ್ನು ಸಂಘಟಕರು ಹೃತ್ಪೂರ್ವಕವಾಗಿ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಲೈಫ್‌ಲೈನ್ ಆಸ್ಪತ್ರೆ ಶಿಬಿರದಲ್ಲಿ ಭಾಗವಹಿಸಿದ ಬ್ಯಾರಿ ಸಮುದಾಯದ ಸದಸ್ಯರಿಗೆ ವಿಶೇಷ ಆರೋಗ್ಯ ಸೌಲಭ್ಯಗಳನ್ನು ಘೋಷಿಸಿತು. ಎಲ್ಲಾ ಫಲಾನುಭವಿಗಳಿಗೆ ಲೈಫ್‌ಲೈನ್ ಪ್ರಿವಿಲೇಜ್ ಕಾರ್ಡ್, ಮುಂದಿನ ತಜ್ಞ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ಶೇ.50 ರಿಯಾಯಿತಿ ಹಾಗೂ ಆಸ್ಪತ್ರೆಯ ನಿಯಮಾನುಸಾರ ಆಯ್ದ ರೋಗನಿರ್ಣಯ ಪರೀಕ್ಷೆಗಳು ಹಾಗೂ ಆರೋಗ್ಯ ತಪಾಸಣೆಗಳ ಮೇಲೆ ಶೇ.20ರಿಂದ 25ರವರೆಗೆ ರಿಯಾಯಿತಿ ನೀಡಲಾಗುವುದಾಗಿ ತಿಳಿಸಲಾಯಿತು.

ಲೈಫ್‌ಲೈನ್ ಆಸ್ಪತ್ರೆಯ ಮಾರ್ಕೆಟಿಂಗ್ ಹೆಡ್ ಅಹ್ಮದ್ ಶಬೀರ್, ಸಹಾಯಕ ವ್ಯವಸ್ಥಾಪಕ (ಬಿಸಿನೆಸ್ ಡೆವಲಪ್‌ಮೆಂಟ್) ಶಬೀರ್ ಕೆ.ಎನ್., ಸಿರಾಜ್ ಹಾಗೂ ವಿಲ್ಸನ್ ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು. 

ಶಿಬಿರದ ಆಯೋಜನೆಯಲ್ಲಿ ಅಫೀಕ್ ಕಾಟಿಪಳ್ಳ, ಫಾರೂಕ್ ಕನ್ನಂಗಾರ್, ಆಸಿಫ್ ದಿವಾನ್, ಅಝರ್ ಉಚ್ಚಿಲ, ಶಂಶು ಉಜಿರೆ, ಫಿರೋಝ್ ಸಲಾಲ, ಫಾರೂಕ್ ಕೃಷ್ಣಾಪುರ, ಜಿಯಾ ಉಳ್ಳಾಲ್, ಶಮೀರ್ ಸೆಂತಿಯಾರ್, ರೆಹಮಾನ್, ಶಾಹಿದ್, ಅಫ್ರೀದ್ ಹಾಗೂ ರಶೀದ್ ಅಡ್ಯಾರ್ ಸೇರಿದಂತೆ ಬ್ಯಾರಿ ಸಮುದಾಯದ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಶ್ರಮವಹಿಸಿದರು.



 


 


 


 


 


 


 


 


 


 


 


 


 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News