×
Ad

ಹಾಸನ : ಎರಡು ಕಡೆ ಲೋಕಾಯುಕ್ತ ದಾಳಿ

Update: 2024-07-11 11:36 IST

ಹಾಸನ: ಬೇಲೂರು ತಾಲೂಕಿನ ವಾಟೆಹಳ್ಳಿಯಲ್ಲಿರುವ ಗ್ರೇಡ್ 1 ಕಾರ್ಯದರ್ಶಿ ಎನ್ .ಎಂ ಜಗದೀಶ್ ಎಂಬವರ ವಾಟೆಹಳ್ಳಿ ನಿವಾಸ ಹಾಗೂ ಬೆಂಗಳೂರಿನ ನಿವಾಸದ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ದಾಳಿ ಮಾಡಿದೆ.

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿ ನಡೆದಿದ್ದು, ಲೋಕಾಯುಕ್ತ ಡಿವೈಎಸ್ಪಿ ಹಾಗು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಮುಂಜಾನೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳ ತಂಡ ಎರಡು ಮನೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News