"ನಮ್ಮ ಪಕ್ಷದಲ್ಲೇ ಉಂಡು, ಬೆಳೆದು ನಂತರ ದ್ರೋಹ ಬಗೆದವರಿಗೆ ಪಾಠ ಕಲಿಸುವ ಸಮಯ ಬಂದಿದೆ": ಶಿವಲಿಂಗೇಗೌಡ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಹಾಸನ: ನಮ್ಮ ಪಕ್ಷದಲ್ಲೇ ಉಂಡು ಬೆಳೆದು ಟಿಕೆಟ್ ಪಡೆದು ಶಾಸಕರಾಗಿ, ನಂತರ ಹೆತ್ತ ತಾಯಿಗೆ ದ್ರೋಹ ಬಗೆದವರ ವಿರುದ್ದ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಜೆಡಿಎಸ್ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅನೇಕ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ಅವು ದೀರ್ಘಕಾಲ ಉಳಿಯಲಿಲ್ಲ. ಆದರೆ ದೇವೇಗೌಡರ ದೂರದೃಷ್ಟಿ, ಬದ್ಧತೆ, ಬಡವರ ಹಾಗೂ ಎಲ್ಲಾ ವರ್ಗದವರ ಆಶೀರ್ವಾದದಿಂದ ಜೆಡಿಎಸ್ ಪಕ್ಷ ಗಟ್ಟಿಯಾಗಿ ನೆಲೆನಿಂತು 25 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಸ್ಪಷ್ಟ ಸಾಧನೆ ಮಾಡದೇ, ಸಾಧನೆ ಹೆಸರಿನಲ್ಲಿ ಸಮಾವೇಶಗಳನ್ನು ಆಯೋಜಿಸಿ ಕುಮಾರಸ್ವಾಮಿ ದೇವೇಗೌಡರ ಕುಟುಂಬದ ಹಾಗೂ ವಿರುದ್ಧ ಟೀಕೆಯಲ್ಲಿ ಕಾಲಹರಣ ಮಾಡುತ್ತಿದೆ. ಜಿಲ್ಲೆಯಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಿ, ಬೇರೆ ಜಿಲ್ಲೆಯಿಂದ ಬಂದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿದ್ದು, ಪಕ್ಷದ 3 ಅಧಿಕಾರ ಕಾರ್ಯಕರ್ತರಿಗೆ ಕೊಡಿಸುವ 1 ದೃಷ್ಟಿಯಿಂದ ಈ ಸಮಾವೇಶದ ಮೂಲಕ ಎಲ್ಲ ನಾಯಕರು ಶಪಥ ಮತ್ತು ಪ್ರತಿಜ್ಞೆ ಮಾಡಬೇಕು. ಈಗಿನಿಂದಲೇ ಚುನಾವಣಾ ಸಿದ್ಧತೆ ಆರಂಭಿಸಬೇಕಿದ್ದು, ಈಗಾಗಲೇ ಒಂದು ಸುತ್ತಿನ ಜಿಲ್ಲಾ ಪ್ರವಾಸ ಮುಗಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮತ್ತೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.