ಹಾಸನ: ರಾ.ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ
Update: 2025-07-29 09:53 IST
ಹಾಸನ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆಯ ಆರೋಪದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಒಟ್ಟು ಐದು ಕಡೆಗಳಲ್ಲಿ ಈ ದಾಳಿ ನಡೆದಿದ್ದು, ಜಯಣ್ಣರ ಮೊದಲ ಪತ್ನಿಯ ನಿವಾಸ (ಹಾಸನ ಜಯನಗರ), ಎರಡನೇ ಪತ್ನಿಯ ನಿವಾಸ (ಚನ್ನಪಟ್ಟಣ ಬಡಾವಣೆ ಹೌಸಿಂಗ್ ಬೋರ್ಡ್), ಎರಡನೇ ಪತ್ನಿಗೆ ಸೇರಿದ ಹಾರ್ಡ್ವೇರ್ ಅಂಗಡಿ (ಚನ್ನಪಟ್ಟಣ), ಕೊಡಗು ಶನಿವಾರಸಂತೆಯಲ್ಲಿರುವ ಫಾರಂ ಹೌಸ್ ಮತ್ತು ಹಾಸನ ಆರ್.ಸಿ. ರಸ್ತೆಯಲ್ಲಿರುವ ಲೋಕೋಪಯೋಗಿ ಭವನದಲ್ಲಿರುವ ಜಯಣ್ಣರ ಕಚೇರಿಗಳಿಗೆ ದಾಳಿ ನಡೆಸಿದರು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.