×
Ad

ಇಂದು ಶ್ರೇಯಸ್ ರನ್ನು ಗೆಲ್ಲಿಸಿದ್ದು ಹಾಸನದ ಜನ, ಅಂದು ದೇವೇಗೌಡರನ್ನು ಸೋಲಿಸಿದ್ದು ನಾನು: ಸಚಿವ ರಾಜಣ್ಣ

Update: 2024-06-08 23:47 IST

ಸಕಲೇಶಪುರ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ, ಅಂದು ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೋಲಿಗೆ ನಾನೇ ಕಾರಣ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಯ ಹೇಳಿದರು.

ಪಟ್ಟಣದಲ್ಲಿ ನಿರ್ಮಾಣ ವಾಗುತ್ತಿರುವ ಶ್ರೀ ಬಸವೇಶ್ವರ ಪುತ್ಥಳಿ ಕಾಮಗಾರಿ ವೀಕ್ಷಿಸಿ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದವರು ಅವರು, ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತುಮಕೂರಿನಲ್ಲಿ ನಮ್ಮ ಅಭ್ಯರ್ಥಿ ಸೋಲು ಕಂಡಿದ್ದಾರೆ. ನಾನು ಹಾಸನ ಜಿಲ್ಲಾ ಉಸ್ತುವಾರಿ, ಡಾ.ಜಿ. ಪರಮೇಶ್ವರ್ ತುಮಕೂರು ಉಸ್ತುವಾರಿ ಸಚಿವರುಗಳು, ನಾವಿಬ್ಬರೂ ತುಮಕೂರಿನ ಮಂತ್ರಿಗಳು ಎಂದರು.

ನನಗೆ ಹಾಸನದ ಉಸ್ತುವಾರಿ ನೀಡಿದ್ದರಿಂದ ಈ ಜಿಲ್ಲೆಯ ಚುನಾವಣೆ ಬಗ್ಗೆ ನಾನು ಹೆಚ್ಚಿನ ರೀತಿಯ ಒತ್ತುಕೊಟ್ಟೆ. ತುಮಕೂರು ಚುನಾವಣೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ ಎಂದು ಉತ್ತರಿಸಿದರು.

ಆದರೆ ನನ್ನ ಸ್ವಕ್ಷೇತ್ರ ಮಧುಗಿರಿಗೆ ನಾನು ಸೀಮಿತವಾಗಿದ್ದೆ. ಆದರೆ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸದಿದ್ದರೆ ಹಾಸನಕ್ಕೆ ಬರಲ್ಲ ಅಂತ ಹೇಳಿದ್ದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಜಾತಿ, ವರ್ಗದವರು ಪಕ್ಷಾತೀತವಾಗಿ ಮತ ಹಾಕಿದ್ದಾರೆ ಎಂದರು.

ನಾನು ಗೆಲ್ಲಿಸಿದ್ದೀನಿ ಅಂತ ಹೇಳಿದ್ರೆ, ಅದು ದುರಂಹಕಾರದ ಮಾತಾಗುತ್ತೆ, ದೇವೇಗೌಡರನ್ನು ಸೋಲಿಸಿದ್ದು ನಾನೇ, ಅದರಲ್ಲಿ ಅನುಮಾನ ಏನೂ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News