×
Ad

ಹಾಸನ | ಇಟ್ಟಿಗೆ ಎತ್ತಿಹಾಕಿ ಅಪರಿಚಿತ ಮಹಿಳೆಯ ಭೀಕರ ಹತ್ಯೆ

Update: 2025-02-13 18:09 IST

ಸಾಂದರ್ಭಿಕ ಚಿತ್ರ

ಹಾಸನ : ಅಪರಿಚಿತ ಮಹಿಳೆಯ ಮೇಲೆ ಇಟ್ಟಿಗೆ ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

ಇಂದು(ಗುರುವಾರ) ಮುಂಜಾನೆ ಈ ಕೃತ್ಯ ನಡೆದಿರುವ ಸಾಧ್ಯತೆ ಇದ್ದು, ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೇ ಇಲಾಖೆಗೆ ಸೇರಿದ ಕಟ್ಟಡದೊಳಗೆ ಕೊಲೆ ಮಾಡಲಾಗಿದೆ.

ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮಹಿಳೆ ಯಾರೆಂಬುದು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News