×
Ad

ಬಾನು ಮುಷ್ತಾಕ್‌ಗೆ ಹಾಸನ ಜಿಲ್ಲಾ ಕಸಾಪದಿಂದ ಅಭಿನಂದನೆ

Update: 2025-05-22 00:28 IST

ಹಾಸನ : ಬೂಕರ್ ಪ್ರಶಸ್ತಿಗೆ ಭಾಜನರಾದ ನಾಡಿನ ಖ್ಯಾತ ಲೇಖಕಿ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾರ್ಗದರ್ಶಿ ಸಮಿತಿಯ ಸದಸ್ಯೆಯಾಗಿರುವ ಬಾನು ಮುಷ್ತಾಕ್‌ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಘಟಕದ ವತಿಯಿಂದ ಅಭಿನಂದನೆಗಳು ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಈ ಪ್ರಶಸ್ತಿ ಬಾನು ಮುಷ್ತಾಕ್‌ ಅವರ ವೈಚಾರಿಕ ಶಕ್ತಿ ಹಾಗೂ ಸಾಹಿತ್ಯದ ಮಟ್ಟವನ್ನೇ ಪ್ರತಿಬಿಂಬಿಸುತ್ತದೆ. ಪರಿಷತ್‌ಗೆ ಇಂತಹ ಸಾಧಕಿಯೊಬ್ಬರು ಮಾರ್ಗದರ್ಶಿಯಾಗಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾನು ಮುಷ್ತಾಕ್‌ ಅವರ ಪತಿ ಮುಷ್ತಾಕ್‌ ಅಹ್ಮದ್, ಪುತ್ರ ತಾಹಿರ್, ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಬೊಂಬೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News