ರಾಷ್ಟ್ರೀಯ ಸಬ್-ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಶಿಪ್ | ಕರ್ನಾಟಕ ತಂಡಕ್ಕೆ ಹಾಸನದ ಸೈಯದ್ ಸಾದತ್ ಆಯ್ಕೆ
Update: 2025-05-23 18:47 IST
ಸೈಯದ್ ಸಾದತ್
ಹಾಸನ : 2025-26ರ ಸಾಲಿನ ರಾಷ್ಟ್ರೀಯ ಸಬ್-ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ನ ಕರ್ನಾಟಕ ತಂಡಕ್ಕೆ ಹಾಸನದ ಆಲೂರಿನ ಮನ್ಸೂರ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಸೈಯದ್ ಸಾದತ್ ಆಯ್ಕೆಯಾಗಿದ್ದಾರೆ.
ಚಾಂಪಿಯನ್‌ಶಿಪ್ ಮೇ 25 ರಿಂದ 28 ರವರೆಗೆ ಮಧ್ಯಪ್ರದೇಶದಲ್ಲಿ ನಡೆಯಲಿದೆ.
ದೈಹಿಕ ಶಿಕ್ಷಕ ಸೈಯದ್ ತೌಕೀರ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಸೈಯದ್ ಸಾದತ್‌ಗೆ ಮನ್ಸೂರ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.