ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ಗೆ ಸಚಿವ ಸತೀಶ್ ಜಾರಕಿಹೊಳಿ ಅಭಿನಂದನೆ
Update: 2025-05-31 00:04 IST
ಹಾಸನ : ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಮನೆಗೆ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಭೇಟಿ ನೀಡಿದ್ದಾರೆ.
ಹಾಸನದ ಪೊಲೀಸ್ ಕ್ವಾಟ್ರಸ್ ಸಮೀಪ ಇರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ತೆರಳಿದ ಸಚಿವರು, ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಬಾನು ಮುಷ್ತಾಕ್ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ತಮ್ಮ ಖಾಸಗಿ ಭೇಟಿಯ ಸಂದರ್ಭದಲ್ಲಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ‘ಈ ಸಾಧನೆ ಕರ್ನಾಟಕದ ಹೆಮ್ಮೆ’ ಎಂದು ಹೇಳಿದರು.
ಸಚಿವರಿಗೆ ‘ಹಸೀನಾ’ ಎಂಬ ತಮ್ಮ ಸಂಕಲನದ ಕೃತಿಗೆ ಸಹಿ ಮಾಡಿ ಬಾನು ಮುಷ್ತಾಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಶ್ರೇಯಸ್ ಪಟೇಲ್, ಜನಪರ ಹೋರಾಟ ಸಂಘಟನೆಯ ಧರ್ಮೇಶ್, ಪೃಥ್ವಿ , ಹನ್ಶದ್ ಪಾಳ್ಯ, ಹೆತ್ತೂರು ನಾಗರಾಜ್, ತೌಫಿಕ್ ಅಹ್ಮದ್, ರಾಜು ಗೊರೂರು, ಜನೆಕೆರೆ ಯೋಗೇಂದ್ರ, ಧರ್ಮಪ್ಪ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.